ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಹೊಸ ಮಾರ್ಗದಲ್ಲಿ ಬಸ್‌ಗಳ ಸಂಚಾರವನ್ನು ಆರಂಭಿಸಿದೆ. ಜುಲೈ 7ರ ಸೋಮವಾರದಿಂದ ಹೊಸ ಮಾರ್ಗದಲ್ಲಿ ನಾನ್ ಎಸಿ ಬಸ್‌ಗಳ ಸಂಚಾರ ಆರಂಭವಾಗಿದೆ.
ಪ್ರಕಟಣೆ ಮೂಲಕ ಬಿಎಂಟಿಸಿ ಹೊಸ ಮಾರ್ಗದ ಕುರಿತು ಮಾಹಿತಿ ನೀಡಿದೆ. ಪ್ರಯಾಣಿರು ಬಸ್ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳ ಮಾರ್ಗ, ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
290-ಎಂವಿ ಮಾರ್ಗದ ಬಸ್ ಯಲಹಂಕ ಎಸ್‌ಎಂನಿಂದ ಹೊರಟು ಎಸ್‌ಎಂವಿಟಿ ಬೆಂಗಳೂರು ರೈಲು ನಿಲ್ದಾಣವನ್ನು ತಲುಪಲಿದೆ. ಈ ಬಸ್ ಕೊಗಿಲು, ಆರ್.ಕೆ. ಹೆಗ್ಡೆ ನಗರ, ಥಣಿಸಂದ್ರ, ನಾಗವಾರ ಮತ್ತು ಮಾರುತಿ ಸೇವಾ ನಗರ ಮೂಲಕ ಸಂಚಾರವನ್ನು ನಡೆಸುತ್ತದೆ.
ಈ ಮಾರ್ಗದಲ್ಲಿ 10 ಬಸ್‌ಗಳು ಸಂಚಾರ ನಡೆಸಲಿವೆ ಎಂದು ಬಿಎಂಟಿಸಿ ಹೇಳಿದೆ. ಯಲಹಂಕದಿಂದ ಮೊದಲ ಬಸ್ ಬೆಳಗ್ಗೆ 5.20ಕ್ಕೆ ಹೊರಡಲಿದೆ. ಕೊನೆಯ ಬಸ್ ಹೊರಡುವ ಸಮಯ 5.20 ಆಗಿದೆ. ಎಸ್‌ಎಂವಿಟಿ ಬೆಂಗಳೂರುನಿಂದ ಮೊದಲ ಬಸ್ ಬೆಳಗ್ಗೆ 5.20 ಮತ್ತು ಕೊನೆಯ ಬಸ್ 10.05ಕ್ಕೆ ಹೊರಡಲಿದೆ.
ಕೆ-2ಬಿ: ಬಿಎಂಟಿಸಿಯ ಕೆ-2ಬಿ ಮಾರ್ಗದ ಬಸ್ ಹೆಬ್ಬಾಳದಿಂದ ನಾಯಂಡಹಳ್ಳಿ ಮೆಟ್ರೋ ನಿಲ್ದಾಣ/ ಜಂಕ್ಷನ್ ನಡುವೆ ಸಂಚಾರವನ್ನು ನಡೆಸಲಿದೆ. ಈ ಬಸ್ ನಾಗಶೆಟ್ಟಿಹಳ್ಳಿ, ರಾಜಾಜಿನಗರ, ಮಾಗಡಿ ರೋಡ್ ಟೋಲ್ ಗೇಟ್, ವಿಜನಗರ ನಡುವೆ ಸಂಚಾರವನ್ನು ನಡೆಸಲಿದೆ.
ಈ ಮಾರ್ಗದಲ್ಲಿನ ಸಂಚಾರಕ್ಕೆ 10 ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಹೆಬ್ಬಾಳದಿಂದ ಮೊದಲ ಬಸ್ ಬೆಳಗ್ಗೆ 5ಕ್ಕೆ ಕೊನೆಯ ಬಸ್ ರಾತ್ರಿ 9.25ಕ್ಕೆ ಹೊರಡಲಿದೆ. ನಾಯಂಡಹಳ್ಳಿಯಿಂದ ಮೊದಲ ಬಸ್ ಬೆಳಗ್ಗೆ 5 ಗಂಟೆಗೆ ಕೊನೆಯ ಬಸ್ ರಾತ್ರಿ 9.25ಕ್ಕೆ ಹೊರಡಲಿದೆ.
ರಾತ್ರಿಯ ಬಸ್ ಸಂಚಾರ ಆರಂಭ: ಬಿಎಂಟಿಸಿ ಎಜಿಎಸ್ ಲೇಔಟ್‌ನಿಂದ ಮೆಜೆಸ್ಟಿಕ್‌ಗೆ ರಾತ್ರಿ, ಮುಂಜಾನೆ ಸಂಚಾರ ನಡೆಸುವ ಜನರ ಅನುಕೂಲಕ್ಕಾಗಿ ಬಸ್‌ಗಳನ್ನು ಪರಿಚಯಿಸಿದೆ.
45ಡಿ ನಂಬರ್‌ನ ಬಸ್ ಎಜಿಎಸ್ ಲೇಔಟ್‌ನಿಂದ ರಾತ್ರಿ 10.15 ಮತ್ತು ಮುಂಜಾನೆ 4.50ಕ್ಕೆ ಹೊರಡಲಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ರಾತ್ರಿ 11.30 ಮತ್ತು ಮುಂಜಾನೆ 5.50ಕ್ಕೆ ಹೊರಡಲಿದೆ.
ಪ್ರಯಾಣಿಕರ ಬೇಡಿಕೆಯುಂತೆ ಬಿಎಂಟಿಸಿ ಹೊಸ ಹೊಸ ಮಾರ್ಗದಲ್ಲಿ ಬಸ್‌ಗಳ ಸಂಚಾರವನ್ನು ಆರಂಭಿಸುತ್ತದೆ. ಫೆಬ್ರವರಿಯಲ್ಲಿ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯಾದ ಮೇಲೆ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಸುಮಾರು 2 ಲಕ್ಷದಷ್ಟು ಹೆಚ್ಚಾಗಿದೆ.
ಬಿಎಂಟಿಸಿ ಸಹ ವಿವಿಧ ಮಾರ್ಗದಲ್ಲಿ ಹೊಸ ಬಸ್, ನಮ್ಮ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಆರಂಭಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುತ್ತಿದೆ. ಸುಮಾರು 6 ಸಾವಿರಕ್ಕೂ ಅಧಿಕ ಬಸ್‌ಗಳನ್ನು ಹೊಂದಿರುವ ಬಿಎಂಟಿಸಿ ಉದ್ಯಾನ ನಗರಿ ಬೆಂಗಳೂರಿನ ಜನರ ಜೀವನಾಡಿಯಾಗಿದೆ.