95 ವರ್ಷದ ದೇವಿಗೆ 3 ಚಿನ್ನದ ಪದಕ

95 ವರ್ಷದ ಭಗವಾನಿ ದೇವಿ ದಾಗರ್ ಅವರು ಪೋಲೆಂಡ್‌ನ ಟೊರುನ್‌ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಒಳಾಂಗಣ ಚಾಂಪಿಯನ್‌ಶಿಪ್‌ನ ಡಿಸ್ಕಸ್ ಎಸೆತದಲ್ಲಿ ಮೂರು ಚಿನ್ನದ ಪದಕಗಳಿಗೆ ಮುತ್ತಿಟ್ಟಿದ್ದಾರೆ.

ಫಿನ್‌ಲ್ಯಾಂಡ್‌ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023ರಲ್ಲಿ 90-94 ವಯೋಮಾನದವರಲ್ಲಿ ಎಲ್ಲರಿಗಿಂತ 100 ಮೀಟರ್ ವೇಗವಾಗಿ ಓಡಿದರು. ಇದಲ್ಲದೆ, 95-99 ವಯೋಮಾನದ ವಿಭಾಗದಲ್ಲಿ ಶಾಟ್‌ಪುಟ್ ಮತ್ತು ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.