ಸುಮ್ನೆ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ
ರಾಮನಗರ: ನನಗೆ ಅಡ್ಡದಾರಿಯಲ್ಲಿ ಹೋಗೋದೇ ಗೊತ್ತಿಲ್ಲ ಎಂದು ಡಾ C.N ಮಂಜುನಾಥ್ ಹೇಳಿದ್ದಾರೆ.
ಭೂ ಒತ್ತುವರಿ ಆರೋಪ ಕುರಿತಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆಸ್ತಿಪಾಸ್ತಿಗೆ ಸಂಬಂಧಿಸಿದಂತೆ ಅಫಿಡವಿಟ್ ಅನ್ನು ಸಲ್ಲಿಸಿದ್ದೇನೆ, ಎಂಪಿಯಾದ ಮೇಲೆ 71 ಎಕರೆ ಜಮೀನು ಖರೀದಿಸುವ ಮಾತು ಹಾಗಿರಲಿ, 7 ಇಂಚು ಜಮೀನನ್ನೂ ಖರೀದಿಸಿಲ್ಲ. 1996 ರಲ್ಲಿ ತಂದೆಯವರು ಕೇತಗಾನಹಳ್ಳಿಯಲ್ಲಿ ಜಮೀನು ಮಾಡಿದ್ದಾರೆ ಅವರು ವಿಧವಶರಾದ ಬಳಿಕ ಅ ಜಮೀನು ತನಗೆ ಬಂದಿದೆ, ಈ ಕುರಿತಂತೆ ಎಲೆಕ್ಷನ್ ಟೈಮಲ್ಲಿ ಅಫಿಡವಿಟ್‌ನಲ್ಲಿ ಸಲ್ಲಿಸಿದ್ದೇನೆ, ಸುಮ್ನೆ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ ಅಷ್ಟೆ, ನನಗೆ ಜೀವನದ ಉದ್ದಕ್ಕೂ ಅಡ್ಡದಾರಿಯಲ್ಲಿ ಹೋಗೋದೇ ಗೊತ್ತಿಲ್ಲ, ಅಡ್ಡಾದರಿ ಹಿಡಿದಿದ್ದರೆ ಈ ಮಟ್ಟಕ್ಕೆ ರಾಷ್ಟ್ರೀಯ ಮಟ್ಟದಲ್ಲೆ ಹೆಸರು ಮಾಡುವುದಕ್ಕೆ ಆಗುತ್ತಿರಲಿಲ್ಲ ಕೊನೆಯ ಅಸ್ತ್ರ ಅಂತ ಈ ರೀತಿ ಅಪಪ್ರಚಾರ ಇರುತ್ತೆ ಎಂದರು.