ವಿಜಯಪುರ: 1885ರಲ್ಲಿ ಸ್ಥಾಪನೆಯಾಗಿ, 140 ವರ್ಷಗಳ ಸುದೀರ್ಘ ಇತಿಹಾಸವಿರುವ ವಿಜಯಪುರ ನಗರದ ಗ್ರಂಥಾಲಯವನ್ನು ಅದೇ ಪರಂಪರೆಯನ್ನು ಕಾಪಾಡುತ್ತಲೇ ನವೀಕೃತ ರೂಪದಲ್ಲಿ ಪುನಶ್ಚೇತನಗೊಳಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಕಾಯಕಲ್ಪಗೊಂಡಿರುವ ಜ್ಞಾನದೇಗುಲವನ್ನು ಉದ್ಘಾಟಿಸಿ ಮಾತನಾಡಿ ಈ ಪುನರುಜ್ಜೀವನ ಕಾರ್ಯವು ನಮ್ಮ ಸಾಂಸ್ಕೃತಿಕ ಹಾಗೂ ಬೌದ್ಧಿಕ ಪರಂಪರೆಯ ಸಂರಕ್ಷಣೆಯ ಜೊತೆಗೆ, ಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವ ನವ ಅಧ್ಯಾಯಕ್ಕೆ ದಾರಿ ತೆರೆದಿದೆ ಎಂದಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಪಂ CEO ರಿಷಿ ಆನಂದ್, ಗ್ರಂಥಾಲಯದ ಅಧಿಕಾರಿಗಳು, ಮುಖಂಡರು ಸೇರಿದಂತೆ ಹಲವರು ಹಾಜರಿದ್ದರು.