ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ: ನೂತನ ಮೇಯರ್ ಜ್ಯೋತಿ ಪಾಟೀಲ, ಸಂತೋಷ ಚವ್ಹಾಣ ಉಪಮೇಯರ್

ಹುಬ್ಬಳ್ಳಿ: ಹು-ಧಾ ಮಹಾನಗರದ ಮೇಯರ್, ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಧಾರವಾಡದ ಪಾಲಿಕೆ ಸದಸ್ಯೆ ಜ್ಯೋತಿ ಪಾಟೀಲ ಮೇಯರ್ ಹಾಗೂ ಸಂತೋಷ ಚೌವ್ಹಾಣ್ ಉಪ ಮೇಯರ್ ಆಗಿ ಆಯ್ಕೆಯಾದರು.
ಸೋಮವಾರ ನಡೆದ ಪಾಲಿಕೆಯ ೨೪ನೇ ಅವಧಿಗೆ ನಡೆದ ಮಹಾಪೌರ ಹಾಗೂ ಉಪಮಹಾಪೌರ ಚುನಾವಣೆಯಲ್ಲಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪ ಮಹಾಪೌರರ ಸ್ಥಾನ ಹಿಂದುಳಿದ `ಬ’ ವರ್ಗಕ್ಕೆ ಮೀಸಲಾಗಿತ್ತು.
ಧಾರವಾಡದ ವಾರ್ಡ್ ನಂ.೧೯ರ ಜ್ಯೋತಿ ಪಾಟೀಲ ಹಾಗೂ ಉಪ ಮೇಯರ್ ಸ್ಥಾನಕ್ಕೆ ಹುಬ್ಬಳ್ಳಿಯ ವಾರ್ಡ್ ನಂ. ೪೧ರ ಸಂತೋಷ ಚೌವ್ಹಾಣ ಆಯ್ಕೆಯಾದರು.
ಜ್ಯೋತಿ ಪಾಟೀಲ ಹಾಗೂ ಸಂತೋಷ ಚವ್ಹಾಣ ಅವರು 47 ಮತಗಳನ್ನು ಪಡೆದು ಆಯ್ಕೆಯಾದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಮೇಯರ್ ಸ್ಥಾನಕ್ಕೆ ವಾರ್ಡ್ ನಂ.೫೯ ರ ಸುವರ್ಣ ಕಲಕುಂಟ್ಲಾ ಹಾಗೂ ಧಾರವಾಡ ವಾರ್ಡ್ ನಂ.೧೪ ರ ಶಂಬುಗೌಡ ಸಾಲಮನಿ ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದರು‌. ಎಐಎಂಐಎಂ ಪಕ್ಷದಿಂದ ವಾರ್ಡ್ ನಂ.೭೬ ರ ವಹೀದ್‌ಖಾನಂ ಕಿತ್ತೂರು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.