ಹುಬ್ಬಳ್ಳಿ- ತುಳಜಾಪುರ ನಡುವೆ “ರಾಜಹಂಸ” ಬಸ್ ವ್ಯವಸ್ಥೆ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಿಂದ ಸೊಲ್ಲಾಪುರ ಹಾಗೂ ತುಳಜಾಪುರಕ್ಕೆ ಹೋಗಿ ಬರುವ ಭಕ್ತಾಧಿಗಳು ವಾಣಿಜ್ಯೋದ್ಯಮಿಗಳು, ಹಾಗೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿಯಿಂದ ತುಳಜಾಪುರಕ್ಕೆ ರಾಜಹಂಸ ಬಸ್ ಸಂಚಾರವನ್ನು ಆರಂಭಿಸಲಾಗಿದೆ.

ನವಲಗುಂದ, ನರಗುಂದ, ಗದ್ದನಕೇರಿ ಕ್ರಾಸ್, ವಿಜಯಪುರ, ಸೋಲಾಪುರ ಮಾರ್ಗವಾಗಿ ಹುಬ್ಬಳ್ಳಿಯಿಂದ ತುಳಜಾಪುರಕ್ಕೆ ನೇರವಾಗಿ ರಾಜಹಂಸ ರಾತ್ರಿ ಸಾರಿಗೆ ಬಸ್ ಸಂಚಾರ ಪ್ರಾರಂಭಿಸಲಾಗಿದೆ

ವೇಳಾಪಟ್ಟಿ: ಹುಬ್ಬಳ್ಳಿ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ರಾತ್ರಿ 10-15ಕ್ಕೆ ಹೊರಟು- ಸೊಲ್ಲಾಪುರ ಬೆಳಿಗ್ಗೆ 5-15ಕ್ಕೆ ಹಾಗೂ ತುಳಜಾಪುರಕ್ಕೆ ಮರುದಿನ ಬೆಳಿಗ್ಗೆ 6-15ಕ್ಕೆ ತಲುಪುತ್ತದೆ. ಇನ್ನು ತುಳಜಾಪುರದಿಂದ ರಾತ್ರಿ 8-15 ಕ್ಕೆ ಹೊರಡುವ ಬಸ್‌ ಸೊಲ್ಲಾಪುರಕ್ಕೆ ರಾತ್ರಿ10-00ಕ್ಕೆ ತಲುಪಲಿದ್ದು, ವಿಜಯಪುರ ಮಾರ್ಗವಾಗಿ ಹುಬ್ಬಳ್ಳಿಗೆ ಮರುದಿನ ಬೆಳಿಗ್ಗೆ 5-00ಕ್ಕೆ ಆಗಮಿಸುತ್ತದೆ.

ಪ್ರಯಾಣ ದರ: ಅಪಘಾತ ಪರಿಹಾರ ಶುಲ್ಕ ಹಾಗೂ ಟೋಲ್ ಫೀ ಸೇರಿ ಹುಬ್ಬಳ್ಳಿಯಿಂದ ಸೊಲ್ಲಾಪುರಕ್ಕೆ ರೂ.568 ಹಾಗೂ ತುಳಜಾಪುರಕ್ಕೆ ರೂ.678 ಪ್ರಯಾಣ ದರ ನಿಗದಿಪಡಿಸಲಾಗಿದೆ.

ಮುಂಗಡ ಬುಕಿಂಗ್‌ನ ರಿಯಾಯಿತಿ: ಈ ಬಸ್ಸಿಗೆ ಮುಂಗಡ ಬುಕ್ಕಿಂಗ್ ಮಾಡಲು www.ksrtc.in ವೆಬ್ ಸೈಟ್, KSRTC Mobile App ಹಾಗೂ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಅವಕಾಶ ಕಲ್ಪಿಸಲಾಗಿದೆ‌. ಒಂದೇ ಟಿಕೆಟ್ ನಲ್ಲಿ 4 ಅಥವಾ ಹೆಚ್ಚು ಆಸನಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇಕಡ5 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಎಂದು ಪ್ರಕಟಣೆಯಲ್ಲಿ ತಿಳಿಸಿದೆ.