ಹಾವೇರಿ ಜಿಲ್ಲೆಯಲ್ಲಿ 4 ಕೊರೋನಾ ಕೇಸ್‌ ದೃಢ

ಹಾವೇರಿ: ಕೊರೋನಾ ಹೊಸ ಅಲೆಯ ಸೋಂಕು ಜಿಲ್ಲೆಗೂ ಕಾಲಿಟ್ಟಿದೆ. ಜಿಲ್ಲೆಯ 4 ಕೊರೋನಾ ಕೇಸ್‌ ದೃಢಪಟ್ಟಿದೆ.
ಹಿರೇಕೆರೂರಿನಲ್ಲಿ 2, ಹಾನಗಲ್ಲ ಮತ್ತು ಹಾನಗಲ್ಲ ತಾಲೂಕಿನ ತಲಾ ಒಬ್ಬರು ಸೇರಿದಂತೆ ನಾಲ್ವರಲ್ಲಿ ಸೋಂಕು ಕಂಡುಬಂದಿದೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಒಂದು, ಮಂಗಳೂರಿನ ಎನಪೋಯಾ ಆಸ್ಪತ್ರೆಯಲ್ಲಿ ಒಂದು, ಇಬ್ಬರು ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಮೂವರು ಪುರುಷರು ಮತ್ತು ಒಬ್ಬರು ಮಹಿಳೆ ಇದ್ದಾರೆ ಎಂದು ಜಿಲ್ಲಾ ಆರೋಗ್ಯ ಮಟ್ಟು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.