ಬೆಂಗಳೂರು: ಕಾಲ್ಲುಳಿತ ಕೊಲೆ ಪ್ರಕರಣದ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ತಮ್ಮ ಹತಾಶ ಪ್ರಯತ್ನ ಮುಂದುವರೆಸಿರುವ ಸಿಎಂ ಸಿದ್ದರಾಮಯ್ಯ ಅವರು ಈಗ ಚಿನ್ನಸ್ವಾಮಿ ಕ್ರೀಡಾಂಗಣವನ್ನ ಸ್ಥಳಾಂತರ ಮಾಡಬೇಕು ಎಂಬ ಹೊಸ ವರಸೆ ಶುರು ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ ಸಾಮಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸ್ಥಳಾಂತರ ಮಾಡಬೇಕಾಗಿರುವುದು ಚಿನ್ನಸ್ವಾಮಿ ಕ್ರೀಡಾಂಗಣವನ್ನಲ್ಲ ಸಿದ್ದರಾಮಯ್ಯನವರೇ, ಸ್ಥಳಾಂತರ ಆಗಬೇಕಿರುವುದು ತಾವು. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ತಾವು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಖ್ಯಮಂತ್ರಿಗಳ ಅಧಿಕೃತ ನಿವಾಸದಿಂದ ಮೈಸೂರಿಗೋ ಅಥವಾ ಸಿದ್ಧರಾಮನಹುಂಡಿಗೋ ಸ್ಥಳಾಂತರ ಆದರೆ ಅದೇ ಕರ್ನಾಟಕಕ್ಕೆ, ಕನ್ನಡಿಗರಿಗೆ ತಾವು ಮಾಡಬಹುದಾದ ಬಹುದೊಡ್ಡ ಉಪಕಾರ ಎಂದಿದ್ದಾರೆ,