ಇಳಕಲ್ : ಯಾವುದೇ ಸೌಲಭ್ಯಗಳು ಇಲ್ಲದ ೪೧ ಶಾಲೆಗಳಿಗೆ ಅನುಮತಿ ನೀಡಿದ್ದ ಇಳಕಲ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ ಕೆ ನಂದನೂರ ಅವರನ್ನು ಕಡ್ಡಾಯ ನಿವೃತ್ತಿಗೆ ಆದೇಶ ಮಾಡಲಾಗಿದೆ .
ಈ ಬಗ್ಗೆ ಧಾರವಾಡ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರೆ ಆದೇಶ ಮಾಡಿ ಬಿ ಕೆ ನಂದನೂರ ಅವರನ್ನು ತತಕ್ಷಣ ನಿವೃತ್ತಿಗೊಳಿಸಿದ್ದಾರೆ, ಬಿ ಕೆ ನಂದನೂರ ರಾಯಚೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದ ಸಮಯದಲ್ಲಿ ೧೪ ತಿರಸ್ಕರಿಸಿದ ಮತ್ತು ೨೭ ಹೊಸದಾಗಿ ಅರ್ಜಿ ಸಲ್ಲಿಸಿದ ಶಾಲೆಗಳಿಗೆ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಬಂದ ಅರ್ಜಿಯ ಮೇಲೆ ತನಿಖೆಯನ್ನು ಮಾಡಲು ಇಲಾಖೆ ಜಿಲ್ಲಾ ಪ್ರಧಾನ ನಿವೃತ್ತ ನ್ಯಾಯಾಧೀಶರಿಗೆ ನೇಮಕ ಮಾಡಿತ್ತು. ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಸಹ ಬಿ ಕೆ ನಂದನೂರ ೪೧ ಶಾಲೆಗಳಿಗೆ ನಿಯಮಬಾಹಿರವಾಗಿ ಅನುಮತಿ ನೀಡಿದ್ದಾರೆ ಅದರಲ್ಲಿ ೧೪ ಶಾಲೆಗಳ ಅನುಮತಿಯನ್ನು ಇಲಾಖೆ ತಿರಸ್ಕಾರ ಮಾಡಿದ್ದರೂ ಆಡಳಿತ ಮಂಡಳಿಗಳ ಮನವಿಯ ಮೇರೆಗೆ ಅನುಮತಿ ನೀಡಿದ್ದರು ಎಂಬುದನ್ನು ಪುರಸ್ಕರಿಸಿದೆ, ನಿವೃತ್ತ ನ್ಯಾಯಾಧೀಶರು ತನಿಖೆ ಮಾಡಿ ನೀಡಿದ ವರದಿಯ ಮೇಲೆ ಧಾರವಾಡದ ಶಿಕ್ಷಣ ಇಲಾಖೆ ಮೇಲಾಧಿಕಾರಿಗಳ ಸೂಚನೆಯಂತೆ ಬಿ ಕೆ ನಂದನೂರ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಿದೆ.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರಾಗಿದ್ದ ಬಿ ಕೆ ನಂದನೂರ ಇದೇ ಮೇ ೩೧ ರಂದು ಸೇವೆಯಿಂದ ನಿವೃತ್ತಿ ಹೊಂದುವವರಿದ್ದರು ಆದರೆ ಅಷ್ಟರಲ್ಲಿ ಇಂತಹ ಘಟನೆ ನಡೆದಿದೆ. ಇವರ ಪತ್ನಿ ಜಾಸ್ಮಿನ್ ಕಿಲ್ಲೇದಾರ ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಬಿ ಕೆ ನಂದನೂರ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಿದ ಆದೇಶ ಪತ್ರ ಗುರುವಾರದಂದು ಡೈಟ್ ಕಚೇರಿಗೆ ಬಂದಿದೆ ನಾನು ಬಾಗಲಕೋಟೆಯಲ್ಲಿ ಇಲಾಖೆಯ ಪರೀಕ್ಷಾ ಕಾರ್ಯದಲ್ಲಿ ಇದ್ದೇನೆ
: ಎಸ್ ಜಿ ಬಳಬಟ್ಟಿ ಪ್ರಭಾರ ಪ್ರಾಚಾರ್ಯ ಡೈಟ್ ಕೇಂದ್ರ ಇಳಕಲ್