ಸೀರೆಯುಟ್ಟು ನರೇಗಾ ಯೋಜನೆಯಲ್ಲಿ ಪುರುಷ ಕಾರ್ಮಿಕನ ದಿನಗೂಲಿ : ಟೀಕೆ

ಇಳಕಲ್: ಪುರುಷನೊಬ್ಬ ಸೀರೆಯುಟ್ಟು ನರೇಗಾ ಯೋಜನೆಯಲ್ಲಿ ದಿನಗೂಲಿ ಪಡೆದಿದ್ದಾನೆ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ತಲೆ ತಿಂದಿದೆ.
ಇಳಕಲ್ ತಾಲೂಕಿನ ಚಿಕನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಅರಣ್ಯ ಇಲಾಖೆಯ ಸಾಮಾಜಿಕ ವಿಭಾಗದಲ್ಲಿ ಇಂತಹ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಬಗ್ಗೆ ಚಿಕನಾಳ ಗ್ರಾಮ ಪಂಚಾಯತಿ ಪಿಡಿಒ ನಾಗರತ್ನ ಅವರನ್ನು ಸಂಪರ್ಕಿಸಿದಾಗ ಇದು ಅರಣ್ಯ ವಲಯದಲ್ಲಿ ನಡೆದ ಘಟನೆ ಬಿಲ್ ಗೆ ಅದನ್ನು ಜೀರೋ ಗೊಳಿಸಿದ್ದಾಗಿ ಅವರು ಹೇಳುತ್ತಾರೆ.

ಮಂಗಳಮ್ಮ ಎಂಬ ಹೆಸರಿನಲ್ಲಿ ಸೀರೆಯುಟ್ಟ ಫೋಟೋ ಇನ್ನೂ ಕೆಲವು ಪಂಚಾಯತಿ ವ್ಯಾಪ್ತಿಗಳಲ್ಲಿ ಓಡಾಡಿದೆ ಎಂಬ ಮಾತುಗಳು ಕೇಳಿ ಬಂದಿದ್ದು ಅವು ಬೇರೆ ತಾಲೂಕಿಗೆ ಸಂಬಂಧಪಟ್ಟಿವೆ, ಮಂಗಳಮ್ಮ ಎಂಬ ಮಹಿಳೆಯ ಹಾಜರಾತಿಯಾಗಿದ್ದು ಫೋಟೋ ಇಲ್ಲದ ಕಾರಣ ಪುರುಷನೊಬ್ಬನಿಂದ ಇಂತಹ ಕಾರ್ಯ ಮಾಡಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ