ಹುಬ್ಬಳ್ಳಿ: ಸಿ.ಎಸ್.ಆರ್. ಅಡಿಯಲ್ಲಿ ಟಾಟಾ ಮೋಟರ್ಸ್ ಕಂಪನಿಯ 32 ಸೀಟರ್‌ಗಳ ವಾಹನವನ್ನು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ವಾರ್ತಾ ಇಲಾಖೆಗಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಸ್ತಾಂತರಿಸಿದ್ದಾರೆ.
ಈ ವಾಹನವು ಹುಬ್ಬಳ್ಳಿಯ ವಾರ್ತಾ ಇಲಾಖೆಯ ಕಚೇರಿಯಲ್ಲಿ ಮಾಧ್ಯಮದವರಿಗಾಗಿ ಕಾರ್ಯ ನಿರ್ವಹಿಸಲಿದ್ದು, ಈ ಮೊದಲು ಮಾಧ್ಯಮ ಮಿತ್ರರಿಗೆ ಪತ್ರಿಕಾ ಗೋಷ್ಠಿ ಮತ್ತು ಸುದ್ದಿ ಪ್ರಸಾರಕ್ಕೆ ಸಂಬಂಧ ಪಟ್ಟಂತೆ ಸಂಚರಿಸಲು ಸುಸಿಜ್ಜಿತ ವಾಹನದ ವ್ಯವಸ್ಥೆ ಇರಲಿಲ್ಲ, ಈ ಸಂಬಂಧ ಮಾಧ್ಯಮದವರು ನನ್ನ ಗಮನಕ್ಕೆ ತಂದು ಹೊಸ ವಾಹನಕ್ಕಾಗಿ ವಿನಂತಿಸಿದ್ದರು. ಅವರ ಕೋರಿಕೆಯ ಮೇರೆಗೆ ಈಗ ಸಿ.ಎಸ್. ಆರ್. ಅಡಿಯಲ್ಲಿ ವಾಹನದ ವ್ಯವಸ್ಥೆ ಮಾಡಲಾಗಿದೆ. ನಮ್ಮ ಮಾಧ್ಯಮ ಮಿತ್ರರಿಗೆ ಪತ್ರಿಕಾ ಗೊಷ್ಠಿ ಮತ್ತು ಸುದ್ದಿ ಪ್ರಸಾರಕ್ಕೆ ಸಂಬಂಧಪಟ್ಟಂತೆ ಸಂಚರಿಸಲು ಜಿಲ್ಲಾ ವಾರ್ತಾ ಇಲಾಖೆಯ ಈ ವಾಹನ ಅನಕೂಲವಾಗಲಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಮ್. ಆರ್. ಪಾಟೀಲ್ ಹಾಗೂ ಜಿಲ್ಲಾಧಿಕಾರಿಗಳು ಮತ್ತು ವಾರ್ತಾ ಇಲಾಖೆಯ ಅಧಿಕಾರಿಗಳು, ಮಾಧ್ಯಮದವರು, ಗಣ್ಯರು ಉಪಸ್ಥಿತರಿದ್ದರು.