ಹಾವೇರಿ: ಸಿಡಿಲು ಬಡಿದು ತಂದೆ ಸ್ಥಳದಲ್ಲಿಯೇ ಮೃತಪಟ್ಟರೆ, ಮಗ ಗಾಯಗೊಂಡ ಘಟನೆ ಶಿಗ್ಗಾವಿ ತಾಲೂಕಿನ ಮುಕಬಸರಿಕಟ್ಟಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಹುಲಿಕಟ್ಟಿ ಗ್ರಾಮದ ಮಾಳಪ್ಪ ಸೋಮಣ್ಣ ಗಡ್ಡೆ(40) ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿ, ಆಕಾಶ್ ಮಾಳಪ್ಪ(19) ಸಿಡಿಲು ಬಡಿದು ಗಾಯಗೊಂಡ ಯುವಕ.
ಈ ಇಬ್ಬರು ಗುರುವಾರ ಸಂಜೆ ಕುರಿ ಮೇಯಿಸುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದು ಈ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ತಂದೆ ಮಾಳಪ್ಪ ಗಡ್ಡೆ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಗಾಯಾಳು ಆಕಾಶ ಅವರನ್ನು ಶಿಗ್ಗಾವಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಶಿಗ್ಗಾವಿ ತಹಶೀಲ್ದಾರ್ ರವಿ ಕೊರವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.