ಸಿಡಿಲು ಬಡಿದು ಓರ್ವ ಸಾವು, ಐವರಿಗೆ ಆಘಾತ

ಬಳ್ಳಾರಿ: ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದ ರಾಜನಮಟ್ಟಿ ಮತ್ತು ಸುಗ್ಗೇನಹಳ್ಳಿ ರಸ್ತೆಯ ಹಿರೇಹೊಲದಲ್ಲಿನ ಕುರಿಮಂದೆಯ ಮೇಲೆ ಮಂಗಳವಾರ ಸಂಜೆ ಪ್ರತ್ಯೇಕ ಎರಡು ಘಟನೆಗಳಲ್ಲಿ ಆರು ಜನ ಕುರಿಗಾಹಿಗಳಿಗೆ ಸಿಡಿಲು ಬಡಿದಿದ್ದು, ಆರು ಜನರನ್ನು ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಇವರಲ್ಲಿ ಕುರಿ ಕರಿಬಸಪ್ಪ ಮೂರ್ತಿ(23) ಎಂಬಾತ ಮೃತಪಟ್ಟಿದ್ದಾನೆ. ಸಿಡಿಲು ಆಘಾತಕ್ಕೆ ಒಳಗಾದ ಕುರಿ ದೊಡ್ಡಬಸಪ್ಪ (50), ಕುರಿ ಪಂಪಾಪತಿ (18), ತಿಪ್ಪೇಸ್ವಾಮಿ (22), ಹೇಮಣ್ಣ (35), ಮಣಿಕಂಠ (18) ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮ ಆಡಳಿತಾಧಿಕಾರಿ ಅಬ್ದುಲ್ ನಿಯಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.