ಸಿಕಂದರಾಬಾದ್‌ – ವಾಸ್ಕೊ ಡ ಗಾಮಾ ನೂತನ ರೈಲಿಗೆ ಅನುಮೋದನೆ

train

ಬೆಂಗಳೂರು: ಸಿಕಂದರಾಬಾದ್ – ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ರೈಲನ್ನು ಹೊಸಪೇಟೆ ಮೂಲಕ ಓಡಿಸೋಕೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರದ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಇಂದಿಲ್ಲಿ ತಿಳಿಸಿದರು.
ತುಮಕೂರಿನ ಗೃಹಕಚೇರಿಯಲ್ಲಿ, ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಕಾಮಗಾರಿಗಳು ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳ ಕುರಿತಂತೆ ರೈಲ್ವೆ ಅಧಿಕಾರಿಗಳ ಸಭೆ ನಡೆಸಿರುವ ಅವರು ಸಿಕಂದರಾಬಾದ್‌ ಜನತೆಯ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದು, ಸಿಕಂದರಾಬಾದ್‌ – ವಾಸ್ಕೊ ಡ ಗಾಮಾ (ಗೋವಾ) ಎಕ್ಸ್‌ʼಪ್ರೆಸ್ ನೂತನ ರೈಲಿಗೆ ಅನುಮೋದನೆ ನೀಡಲಾಗಿದೆ. ಈ ನೂತನ ರೈಲು ವಾರಕ್ಕೆ ಎರಡು ದಿನ ಸಂಚರಿಸಲಿದೆ ಎಂದಿದ್ದಾರೆ.