ಸಿಎಂ ಮನೆಗೆ ಬಾಂಬ್ ಬೆದರಿಕೆ ಸಂದೇಶ

ಬೆಂಗಳೂರು: ಮುಖ್ಯಮಂತ್ರಿ ಮನೆ ಹಾಗೂ ಕೋರಮಂಗಲದ ಪಾಸ್​​ಪೋರ್ಟ್​ ಕಚೇರಿಗೆ ಬಾಂಬ್​ ಇಟ್ಟು ಬ್ಲಾಸ್ಟ್​​ ಮಾಡುವುದಾಗಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿರುವಂತಹ ಘಟನೆ ನಡೆದಿದೆ.
ಆತ್ಮಾಹುತಿ ಬಾಂಬ್​ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ದಳ ಮತ್ತು ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ತನಿಖೆ ಮುಂದುವರೆದಿದೆ. ಬಾಂಬ್ ಬೆದರಿಕೆ ಸಂದೇಶದಲ್ಲಿ ಇಂದು ಇಸ್ಲಾಂನ ದುಲ್ ಹಜ್ ಪವಿತ್ರ ದಿನ. ಅಮೋನಿಯಮ್ ಸಲ್ಫರ್ ಬೇಸ್ಡ್ ಐಇಡಿ ಬಳಸಿ ಬೆಂಗಳೂರಿನ ಪಾಸ್​​ಪೋರ್ಟ್ ಕಛೇರಿ ಮತ್ತು ಸಿಎಂ ಮನೆಗೆ ಬಾಂಬ್​​ ಇಟ್ಟು ಬ್ಲಾಸ್ಟ್​ ಮಾಡುತ್ತೇವೆ. ಸವುಕ್ಕು ಶಂಕರ್ ಮತ್ತು ಕಸಬ್ (ತಾಜ್ ಅಟ್ಯಾಕ್)ನನ್ನು ಗಲ್ಲಿಗೇರಿಸಿದ್ದಕ್ಕೆ ಇದು ಪ್ರತಿಕಾರ ಎಂದು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದೆ.