ಬೀದರ್: ಆಕಸ್ಮಿಕ ಅಗ್ನಿದುರಂತದಲ್ಲಿ ಲಕ್ಷಾಂತರ ಮೌಲ್ಯದ ವಿವಿಧ ಪರಿಕರಗಳು ಸುಟ್ಟು ಹಾನೀಗೀಡಾಗಿರುವ ಘಟನೆ ಪಟ್ಟಣದ ಸರ್ಕಾರಿ ಆಸ್ಪತ್ರೆ ಹಳೆ ಕಟ್ಟಡದಲ್ಲಿ ಗುರುವಾರ ಮಧ್ಯಾಹ್ನ 2ಗಂಟೆ ಆಸುಪಾಸು ಸಂಭವಿಸಿದೆ.
ಘಟನೆ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿದ್ದ ಅಂದಾಜು 25ಐಸಿಯು ಬೆಡಗಳು, ಅಂದಾಜು 75ಕ್ಕೂ ಅಧಿಕ ಹಳೆ ಬೆಡ್ ಗಳು ಹಾಗೂ 30ವರ್ಷ ಹಿಂದಿನ ಹಳೆ ದಾಖಲೆಗಳು ಬೆಂಕಿಗೆ ಆಹುತಿಯಾಗಿರುವುದಾಗಿ ತಿಳಿದುಬಂದಿದೆ.
ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಅಗ್ನಿನಂದಿಸಲು ಏನೆಲ್ಲ ಹರಸಾಹಸಪಟ್ಟರು. ಹಾನಿ ತಪ್ಪಿಸಲು ಸಾಧ್ಯವಾಗಲಿಲ್ಲ. ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಹಾಗೂ ಸಿಬ್ಬಂದಿ ಹಾಜರಿದ್ದರು.