ಸಂದರ್ಭದೊಡನೆ ಸ್ಪಷ್ಟೀಕರಿಸಿ…

ಈಕೆಳಕಂಡ ಪ್ರಶ್ನೆಗಳಿಗೆ ಸಂದರ್ಭದೊಡನೆ ಸ್ಪಷ್ಟೀಕರಿಸಿ. ಸರಿಯಾದ ಉತ್ತರಗಳಿಗೆ ಫುಲ್ ಅಂಕಗಳು ನೀಡಲಾಗುವುದು. ಉತ್ತರಗಳು ತಪ್ಪಾದರೆ ಅಂಕಗಳನ್ನು ಕತ್ತರಿಸುವುದಿಲ್ಲ. ಕತ್ತರಿಸಿದರೂ ಅರ್ಧಂಬರ್ಧ ಮಾತ್ರ. ನಿಮಗೆ ಅನುಕೂಲವಾಗಲಿ ಎಂದು ಪ್ರಶ್ನೆಗಳ ಕೆಳಗೆ ಆಯ್ಕೆಗಳನ್ನು ನೀಡಲಾಗಿದೆ. ಅದರಲ್ಲಿ ಆಯ್ಕೆ ಮಾಡಿಕೊಂಡು ಬರೆಯುವುದು…
೧) ನಾನೊಲ್ಲೆ ನಾನೊಲ್ಲೆ… ನಾನಿಲ್ಲೇ ನಾನಿಲ್ಲೆ… ಸೇದೋದಿಲ್ಲ ಸಿಗರೇಟು.. ಕುಡಿಯುವುದಿಲ್ಲ ಡಿಕಾಕ್ಷನ್ ಕಾಫಿ…

  • ಕೇಜರಿವಾಲ ಸಾಹೇಬ್ರು * ಲಮಿತ್ ಕಾಕಾ * ನಟ ದರ್ಶನ್ * ಯಾರೂ ಇಲ್ಲ
    ೨) ದೇಖಿಯೇ ಸಬ್ ಕಾ ಮಾತ್- ಸಬ್ ಕಾ ಬಾತ್ ಅಂದವರು
  • ಬಾಜೂಮನಿ ಭಾಗ್ಯಕ್ಕ * ತಳವಾರ್ಕಂಟಿ * ತಾತಪ್ಪೇಶ್ವರ * ಅಲ್ಲಿದ್ದಾರಲ್ಲ ಅವರು
    ೩) ನಾ ಮನಸು ಮಾಡಿದರೆ ಲಕ್ಸ… ಲಕ್ಸ ಓಟುಗಳು ಬತ್ತಾವೆ
  • ಪಂ. ಲೇವೇಗೌಡರು * ಮದ್ರಾಮಣ್ಣೋರು * ಸುಮಾರಣ್ಣೋರು * ಇಬ್ಬಿಸಾಬರು
    ೪) ನಾನೊಂದು ತೀರ-ನೀನೊಂದು ತೀರ ಇಲ್ಲಿ ಕಣ್ಣೀರ ನೀರಾ…
  • ಭಾರೀ ಗೆಳತಿ ತ್ರಪವಿ ಡಗೌ * ಮೇಕಪ್ ಮರೆಮ್ಮ * ಕರಿಭಾಗೀರತಿ * ಮಾಬಕ್ಕ ರಕಂದ್ಲಾಜೆ
    ೫) ಅಯ್ಯೋ ಅದಾ ನನಗೆ ಗೊತ್ತೇಳು…
  • ಡಿಂಗರಬಿಲ್ಲೇಶ * ಲಾದುಂಚಿ ರಾಜ * ಸೋನಮ್ಮಕ್ಕಾರು * ಪಂಜಿಬಾಬ್ಯಾ
    ೬) ನೀನು ಜಮ್ಮಚಕ್ಕ- ನಾನು ಅವರಕ್ಕ
  • ಮೂಲಿಮನಿ ಮಾಳವ್ವ * ವಾಳದ ಫಕೀರವ್ವ * ನಿರೂಪಕಿ ಕಿವುಡನುಮಿ * ಮಾಬಕ್ಕಾರು