ಷರೀಫ್ ಹೇಡಿ, ಮೋದಿ ಹೆಸರು ಹೇಳೋಕು ಹೆದರುತ್ತಾರೆ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೊಬ್ಬ ಹೇಡಿ(ಬುಜ್ದಿಲ್), ಅವರ ಪ್ರತಿಕ್ರಿಯೆಯ ಕೊರತೆಯಿಂದ ಪಾಕಿಸ್ತಾನ ಸೇನೆ ನೈತಿಕ ಸ್ಥೈರ್ಯ ಕಳೆದುಕೊಂಡಿದೆ. ಭಾರತದ ಪ್ರಧಾನಿ ಮೋದಿ ಹೆಸರು ಹೇಳುವುದಕ್ಕೂ ಅವರು ಹೆದರುತ್ತಿದ್ದಾರೆ ಎಂದು ತೆಹ್ರೀಕ್-ಇ-ಇನ್ಸಾಫ್ ಪಾರ್ಟಿಯ ಸಂಸದ ಶಹಿದ್ ಅಹ್ಮದ್ ಖಟ್ಟಕ್ ಅವರು ಶುಕ್ರವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲೇ ಪ್ರಧಾನಿ ಷರೀಫ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.
“ಭಾರತದ ವಿರುದ್ಧ ಒಂದೇ ಒಂದು ಹೇಳಿಕೆ ಬಂದಿಲ್ಲ. ಗಡಿಯಲ್ಲಿ ನಿಂತಿರುವ ಸೈನಿಕರು ಸರ್ಕಾರದ ಧೈರ್ಯ ತುಂಬುವ ಮಾತುಗಳನ್ನು ನಿರೀಕ್ಷಿಸುತ್ತಾರೆ. ನಿಮ್ಮ ನಾಯಕ, ಮೋದಿಯ ಹೆಸರನ್ನೂ ಹೇಳಲಾಗದ ಹೇಡಿ. ಗಡಿಯಲ್ಲಿ ಹೋರಾಡುವ ಸೈನಿಕರಿಗೆ ನೀವು ಯಾವ ಸಂದೇಶ ನೀಡುತ್ತಿದ್ದೀರಿ”ಎಂದು ಖಟ್ಟಕ್ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ ಷರೀಫ್ ಅವರನ್ನು ಗೀಡಾದ್(ನರಿ) ಎಂದು ಜರೆದ ಅವರು, ಸಿಂಹದ ನೇತೃತ್ವದಲ್ಲಿ ನರಿಗಳಿಂದ ಕೂಡಿದ ಸೈನ್ಯವಿದ್ದರೆ, ನರಿಗಳೂ ಸಿಂಹಗಳಂತೆ ಹೋರಾಡುತ್ತವೆ ಎಂದಿದ್ದಾರೆ.