ಶೆಟ್ಟರ ಮೇಲೆ ಹೇರಿರುವ ನಿರ್ಬಂಧ ಕೂಡಲೇ ತೆರವುಗೊಳಿಸಿ

ಬೆಂಗಳೂರು: ಶೆಟ್ಟರ ಮೇಲೆ ಹೇರಿರುವ ನಿರ್ಬಂಧವನ್ನು ಸರ್ಕಾರ ಕೂಡಲೇ ತೆರವುಗೊಳಿಸಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಮುಧೋಳ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಉದ್ಘಾಟನೆಯಲ್ಲಿ ಭಾಗವಹಿಸಲು ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತದ ಕಾರ್ಯಕಾರಿಣಿ ಸದಸ್ಯರಾದ ಶ್ರೀಕಾಂತ್ ಶೆಟ್ಟರಿಗೆ ಪೊಲೀಸರು ನಿರ್ಬಂಧ ಹೇರಿದ್ದಾರೆ.
ಇತಿಹಾಸವನ್ನು ಪಕ್ವಾವಾಗಿ ಅರ್ಥೈಸಿಕೊಂಡು ಸಿಡಿಲೆಬ್ಬರದ ಭಾಷಣ ನೀಡುವ ಶೆಟ್ಟರು ಕಾಂಗ್ರೆಸ್ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿದ್ದಾರೆ. ಈ ಹಿಂದೆಯೂ ಪೊಲೀಸರು ಇವರ ಮನೆಯ ಹಾಗೂ ಚಲನವಲನಗಳ ಮೇಲೆ ನಿಗ ಇಟ್ಟಿದ್ದರು. ಸರ್ಕಾರ ತನ್ನ ಆಡಳಿತ ಯಂತ್ರವನ್ನು ಮತ್ತು ಬೇಹುಗಾರಿಕೆಯನ್ನು ರಾಜ್ಯದ ಆಂತರಿಕ ಭದ್ರತೆ ಕಾಪಾಡುವುದಕ್ಕೆ ಬಳಸಬೇಕು ಹೊರತು ಚಕ್ರವರ್ತಿ ಸೂಲಿಬೆಲೆ ಮತ್ತು ಶ್ರೀಕಾಂತ್ ಶೆಟ್ಟರ ಮೇಲಲ್ಲ. ಶೆಟ್ಟರ ಮೇಲೆ ಹೇರಿರುವ ನಿರ್ಬಂಧವನ್ನು ಸರ್ಕಾರ ಕೂಡಲೇ ತೆರವುಗೊಳಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜೆಗಳ ಹಕ್ಕು ಎಂಬುದನ್ನು ಕಾಂಗ್ರೆಸ್ ಮರೆಯದಿರಲಿ ಎಂದಿದ್ದಾರೆ.