ರಾಯಚೂರು: ಸರ್ಕಾರದ ಸ್ವಪಕ್ಷದ ಶಾಸಕರಿಗೆ ಸರ್ಕಾರ ವಿರುದ್ಧ ಅಮಾಧಾನವಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಶಾಕರಿಗೆ ಅನುದಾನ ಸರಿಯಾಗಿ ಕೋಡುತ್ತಿಲ್ಲ. ಇನ್ನೂ ನಮ್ಮ ಪಕ್ಷದ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಹೇಗೆ ನೀಡುತ್ತಾರೆ ಎಂದು ಟೀಕಿಸಿದರು, ನಮ್ಮ ರಾಜ್ಯವನ್ನು ದರಿದ್ರ ಪರಿಸ್ಥಿತಿಗೆ ತಂದಿದ್ದಾರೆ, ತಾಕತ್ತಿದ್ದರೆ ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಪಕ್ಷ ಬದ್ಧವಾಗಿದೆ, ರಾಜ್ಯ ಸರ್ಕಾರ ರೈತರ ಸಮಸ್ಯೆಗೆ ಕಿವಿಗೊಡುತ್ತಿಲ್ಲ. ಕಲ್ಯಾಣ ಕರ್ನಾಟಕದ ಹೆಸರು ತುಂಬಾ ಚೆನ್ನಾಗಿದೆ. ಹೆಸರಲ್ಲೇ ಕಲ್ಯಾಣ ಇದೆ ಆದರೆ ಯಾರ ಕಲ್ಯಾಣ ಆಗ್ತಿದೆ ಎಂದು ಪ್ರಶ್ನಿಸಿದರು.