ಶಾಲೆಗೆ ನುಗಿದ್ದ ಚರಂಡಿ ನೀರು ಮೊಣಕಾಲುದ್ದ ನೀರಿನಲ್ಲಿ ಶಾಲೆಗೆ ಬಂದ ವಿದ್ಯಾರ್ಥಿಗಳು

ಯಾದಗಿರಿ: ಬೇಸಿಗೆ ರಜೆ ಬಳಿಕ ಗುರುವಾರ ಆರಂಭವಾದ   ಶಾಲೆಗೆ ಬಂದ  ವಿದ್ಯಾರ್ಥಿಗಳಿಗೆ ಆವರಣದಲ್ಲಿದ್ದ ಚರಂಡಿ ನೀರು ಸ್ವಾಗತ ನೀಡಿದಂತ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶಹಾಪುರ ತಾಲೂಕಿನ ಧರಿಯಾಪುರ ಗ್ರಾಮದ ಸರಕಾರಿ ಶಾಲೆಯ ಆವರಣದಲ್ಲಿ ಚರಂಡಿ ನೀರು ಹೊಕ್ಕು  ಸಂಪೂರ್ಣ ಜಲಾವೃತ್ತಗೊಂಡ ಪರಿಣಾಮ ಶಾಲಾ ಆರಂಭದ ಮೊದಲ ದಿನವೇ  ಮಕ್ಕಳು ಪರದಾಟ ನಡೆಸಿದ್ದಾರೆ.

ಏನಿದು ಘಟನೆ…? : ಬುಧವಾರ ಯಾದಗಿರಿ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿದ್ದು, ಇದರ ನಡುವೆ  ಊರಿನ ಚರಂಡಿ ನೀರು ತುಂಬಿ ಶಾಲಾ ಆವರಣಕ್ಕೆ ಕೊಳಚೆ ನೀರು ನುಗ್ಗಿದ್ದರೆ, ಮೊಣಕಾಕಾಲುದ್ದ ನೀರಲ್ಲೇ ವಿದ್ಯಾರ್ಥಿಗಳು ಶಾಲೆಗೆ ಆಗಮಿಬೇಕಾಗದೆ.. ಡ್ರೈನೇಜ್ ನಲ್ಲಿ ನೀರು ಸರಾಗವಾಗಿ ಸಾಗದ ಹಿನ್ನೆಲೆ ಶಾಲಾ ಆವರಣಕ್ಕೆ  ನೀರು ನುಗ್ಗಿದೆ. ಇದಕ್ಕೆ ಕಾರಣವಾದ ಅಧಿಕಾರಿಗಳ  ಮೇಲೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಾ ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ದರಿಯಾಪುರ ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ ಸುರಕ್ಷತೆ ಮತ್ತು ನೈರ್ಮಲ್ಯ ಸ್ಥಿತಿಯನ್ನು ಕಾಯ್ದುಕೊಳ್ಳದನ್ನು  ಮನಗಂಡು ಶಾಲಾ ಆರಂಭದ ಹೊತ್ತಲ್ಲಿ ತೆರೆಯುವ ಹೊತ್ತಲ್ಲಿ  ಸ್ವಯಂಪ್ರೇರಿತ ದೂರು ದಾಖಲಿಸಿದೆ’ ಎಂದು ವರದಿಯಾಗಿದೆ.