ಶಾಲಾ ಮೇಲ್ಛಾವಣಿ ಕುಸಿದು ಬಾಲಕನಿಗೆ ಗಾಯ

ಬಳ್ಳಾರಿ: ತಾಲೂಕಿನ ಸಿರವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಮೇಲ್ಛಾವಣಿ ಕುಸಿದು ಬಾಲಕನ ತೆಲೆಗೆ ಪೆಟ್ಟು ಬಿದ್ದ ಘಟನೆ ಮಂಗಳವಾರ ನಡೆದಿದೆ.
ಮೂರನೇ ತರಗತಿಯ ವಿದ್ಯಾರ್ಥಿ ಸೋಮಲಿಂಗಪ್ಪ ಗಾಯಾಳು. ಈ ಶಾಲೆಯಲ್ಲಿ ಒಂದ ರಿಂದ ಎಂಟನೇ ತರಗತಿಯವರಗೆ ಒಟ್ಟು 800 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಹೊಸ ಹತ್ತು ಹಾಗೂ ಹಳೆಯ ಒಂಬತ್ತು ಸೇರಿ ಒಟ್ಟಾರೆ 19 ಶಾಲಾ ಕೊಠಡಿಗಳಿವೆ. ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದ ನಾಲ್ಕು ಕೊಠಡಿಗಳು ಸಂಪೂರ್ಣವಾಗಿ ಶಿಥಿಲಾಗೊಂಡಿವೆ. ಇದರಿಂದ ಎಲ್‌ಕೆಜಿ , ಯುಕೆಜಿ, ಒಂದ ರಿಂದ ಮೂರನೇ ತರಗತಿಯವರೆಗೆ ಶಾಲಾ ಆವರಣದ ಮರಗಳ ಕೆಳಗಡೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಸೋಮಲಿಂಗಪ್ಪ ವಿದ್ಯಾರ್ಥಿಯೂ ಶಿಥಿಲಾಗೊಂಡ ಕೊಠಡಿಯೊಳಗೆ ಬೆಳಗ್ಗೆ ಪ್ರವೇಶಿಸಿದ ವೇಳೆ ಮೇಲ್ಛಾವಣಿ ಕುಸಿದು ತಲೆಗೆ ಪೆಟ್ಟಾಗಿದೆ. 2009ರಲ್ಲಿ ಹಳೆಯ ಒಂಬತ್ತು ಕೊಠಡಿಗಳನ್ನು ನಿರ್ಮಿಸಲಾಗಿತ್ತು ಎಂಬುದಾಗಿ ಅಧಿಕಾರಿ ತಿಳಿಸಿದರು. ಶಿಕ್ಷಣ ಸಚಿವ ಎಸ್.ಮಧುಬಂಗಾರಪ್ಪ ಸೋಮವಾರ ನಗರದ ಶಾಲೆಯೊಂದಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸವಿದು ಅಧಿಕಾರಿಗಳ ಜತೆ ಸಭೆ ನಡೆಸಿದ್ದರು. ಆದರೆ, ಗ್ರಾಮೀಣ ಭಾಗದಲ್ಲಿ ಕೊಠಡಿಗಳ ಅಭಾವದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂಬಂತೆಯಾಗಿದೆ.