ರಾಯಚೂರು: ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಮಾಕ್ ಡ್ರಿಲ್ ಮಾಡುವ ಆದೇಶ ಬಂದಿದೆ. ಯಾವ ರೀತಿ ಮಾಕ್ ಡ್ರಿಲ್ ಮಾಡಬೇಕು ಎಂಬ ಪ್ರೋಟೋಕಾಲ್ ಕಳಿಸಿಕೊಡುತ್ತಿದ್ದಾರೆ. ಶಕ್ತಿನಗರದಲ್ಲಿ ಮೇ 7ರಂದು ಮಾಕ್ ಡ್ರಿಲ್ ಮಾಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಅವರು ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ರೀತಿ ಮಾಡಬೇಕು ಹಾಗೂ ಯಾವ ಸಮಯಕ್ಕೆ ಮಾಡಬೇಕು ಎಂಬ ನಿರ್ದೇಶನ ಇಷರಲ್ಲೇ ಬರುತ್ತದೆ.
ರಾಜ್ಯ ಸರ್ಕಾರದಿಂದ ನಮಗೆ ನಿರ್ದೇಶನಗಳು ಬರುತ್ತವೆ. ಕೇಂದ್ರ ಸರ್ಕಾರದ ಸಿವಿಲ್ ಡಿಫೆನ್ಸ್ ಹಾಗೂ ರಾಜ್ಯ ಸರ್ಕಾರ ಮತ್ತು ಪೊಲೀಸರ ಜೊತೆ ಚರ್ಚಿಸಿ ಸಮಯ ನಿಗದಿ ಮಾಡಲಾಗುವುದು. ಸ್ಥಳೀಯ ಪೊಲೀಸ್, ಅಗ್ನಿಶಾಮಕ, ಎನ್‌ಸಿಸಿ, ಸ್ವಯಂ ಸೇವಕರು ಭಾಗವಹಿಸಲಿದ್ದಾರೆ. ಸ್ಥಳೀಯರು ಎಚ್ಚರಿಕೆಯಿಂದ ಇರಲಿ ಎಂದು ಮಾಕ್ ಡ್ರಿಲ್ ಮಾಡಲಾಗುತ್ತಿದೆ ಎಂದು ಹೇಳಿದರು.