ವಿದ್ಯುತ್ ಶಾಕ್: ದಂಪತಿ ಸಾವು

ಶಿವಮೊಗ್ಗ: ಸೊರಬದ ಕಪ್ಪಗಳಲೆಯಲ್ಲಿ ಬಟ್ಟೆ ಒಣ ಹಾಕಲು ಹೋದ ಪತ್ನಿಗೆ ವಿದ್ಯುತ್ ಶಾಕ್ ಹೊಡೆದು ಒದ್ದಾಡುವುದನ್ನ ನೋಡಿ ಬಜಾವ್ ಮಾಡಲು ಹೋದ ಪತಿಗೂ ಶಾಕ್ ಹೊಡೆದು ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಸೊರಬದ ಕಪ್ಪಗಳಲೆಯಲ್ಲಿ ವಿದ್ಯುತ್ ಸ್ಪರ್ಶಿಸಿ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಪ್ಪಗಳಲೆ ಕೃಷ್ಣಪ್ಪ ದಂಪತಿ ಮೃತ ದುರ್ದೈವಿಗಳಾಗಿದ್ದಾರೆ. ಮೃತರು ಮೂವರು ಮಕ್ಕಳನ್ನು ಅಗಲಿದ್ದಾರೆ. ಬಟ್ಟೆ ಒಗಣಿಸಿದ ತಂತಿ ಯಿಂದ ವಿದ್ಯುತ್ ಸ್ಪರ್ಶ ವಾಗಿ ಪತಿ ಕೃಷ್ಣಪ್ಪ (55) ಹಾಗೂ ಪತ್ನಿ ವಿನೋದ (42) ಸಾವನಪ್ಪಿದ ದುರ್ದೈವಿಗಳಾಗಿದ್ದಾರೆ.
ರಾತ್ರಿ 9 ಗಂಟೆ ವೇಳೆಗೆ ಘಟನೆ ನಡೆದಿದೆ. ಮನೆಯ ಮುಂದೆ ಬಟ್ಟೆ ಒಣಗಿಸಲು ಕಟ್ಟಿದ್ದ ಕಬ್ಬಿಣದ ತಂತಿಗೆ ಅವರ ಮನೆಗೆ ಹೋಗುವ ಹಲವು ವೈಯರ್‌ಗಳು ಈ ತಂತಿ‌ಮೂಲಕ ಹಾದು ಹೋಗಿದೆ. ಅದರಲ್ಲಿ ಮೋಟಾರ್ ವೈಯರು ಸಹ ಹಾದು ಹೋಗಿರುವುದರಲ್ಲಿ ಸ್ಕಿನ್ ಆಗಿದೆ. ಒಣಗಿದ ಬಟ್ಟೆ ತೆಗೆಯಲು ಮುಂದಾದ ಕೃಷ್ಣಪ್ಪ ಮತ್ತು ಪತ್ನಿ ವಿನೋದಗೆ ಶಾಕ್ ಆಗಿದೆ.
ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆ ತಂತಿ ತೇವಗೊಂಡಿದೆ. ನಂತರ ತಂತಿ ಸ್ಪರ್ಶಿಸಿದ ವಿನೋದಳಿಗೆ ವಿದ್ಯುತ್ ತಗುಲಿದೆ. ನಂತರ ತಪ್ಪಿಸಲು ಬಂದ ಕೃಷ್ಣಪ್ಪಗೂ ವಿದ್ಯುತ್ ತಗುಲಿಸ್ಥಳದಲ್ಲೇ ಇಬ್ಬರ ಸಾವಾಗಿದೆ. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗು ಹೊಂದಿದ್ದ ದಂಪತಿಯ ಮೃತದೇಹಗಳು ಸೊರಬದ ಶವಗಾರಕ್ಕೆ ರವಾನಿಸಲಾಗಿದೆ. ಪಿಎಸ್ಐ ನವೀನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.