ವಿಜಯಪುರ: ಈರುಳ್ಳಿ ದರ ತೀವ್ರ ಕುಸಿತ ಹಿನ್ನೆಲೆ ಕುಪಕಡ್ಡಿ ಬಳಿಯ ತೋಟಗಾರಿಕೆ ಎಫ್ಪಿಒ ಆವರಣದಲ್ಲಿ ರೈತರು ಈರುಳ್ಳಿ ಸುರಿದು ಪ್ರತಿಭಟನೆ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ಕೊಲ್ಲಾರ ತಾಲ್ಲೂಕಿನ ಕುಪಕಡ್ಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಈರುಳ್ಳಿ ಸುರಿದು ಪ್ರತಿಭಟನೆ ಮಾಡಿರುವ ರೈತರರು, ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಾಲ್ ಗೆ ಕೇವಲ 200 ರೂಪಾಯಿಗೆ ಹರಾಜಾಗುತ್ತಿದೆ. ಕಡಿಮೆ ದರಕ್ಕೆ ಹರಾಜಾದ ಕಾರಣ ಈರುಳ್ಳಿ ಬೆಳೆಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಈರುಳ್ಳಿ ಬಾಗಲಕೋಟೆಯಲ್ಲಿ ಕ್ವಿಂಟಾಲ್‌ಗೆ 1000 ರೂಪಾಯಿಗೆ ಮಾರಾಟವಾಗಿತ್ತು. ಡಿಎಪಿ ರಸಗೊಬ್ಬರ 1200 ರೂ., ಯೂರಿಯಾ 300 ರೂ. ಇದೆ. ನಾವು ಕಷ್ಟಪಟ್ಟು ಬೆಳೆದ ಈರುಳ್ಳಿಗೆ ಕೇವಲ 200 ರೂ. ಯಾಕೆಂದು ರೈತರು ಪ್ರಶ್ನೆ ಮಾಡಿದ್ದಾರೆ.