ವಾಯುಸೇನೆಗೆ ಸೇರುವ ಕನಸು ಕೈಗೂಡಲಿಲ್ಲ

ಕಲಬುರಗಿ: ದೇಶಸೇವೆ ಮಾಡುವ ಅದಮ್ಯ ಉತ್ಸಾಹವಿರುವ ಉತ್ತರ ಕರ್ನಾಟಕದ ಯುವ ಜನರಿಗೆ ಕಲಬುರಗಿಯಲ್ಲಿ ಉತ್ತಮ ಅವಕಾಶವೊಂದನ್ನು ಸೃಷ್ಟಿಸಲಾಗಿದೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ ಎರಡನೇ ತಂಡದ ತರಬೇತಿಗೆ ಚಾಲನೆ ನೀಡಿ ಮಾತನಾಡಿರುವ ಅವರು ಉತ್ತರ ಕರ್ನಾಟಕದಲ್ಲಿ ಭಾರತೀಯ ಸೈನ್ಯ ಹಾಗೂ ಇತರ ಸೇವೆಗಳಿಗೆ ಸೇರುವ ಹಂಬಲ ಹೊಂದಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಪೂರ್ವಸಿದ್ದತಾ ತರಬೇತಿ ಶಾಲೆಯ ಕೊರತೆ ಇತ್ತು, ಈಗ ಆ ಕೊರತೆ ನೀಗಿಸಲು ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಕಲಬುರಗಿಯಲ್ಲಿ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯನ್ನು ಪ್ರಾರಂಭಿಸುವ ಮೂಲಕ ಹಿಂದುಳಿದ ವರ್ಗಗಳ ಯುವಜನರಿಗೆ ಸೇನೆ ಸೇರುವಲ್ಲಿ ನೆರವು ಹಾಗೂ ಮಾರ್ಗದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

  • ಪ್ರತಿ ಬ್ಯಾಚ್ ನಲ್ಲಿ 100 ಜನರಂತೆ ವರ್ಷಕ್ಕೆ ಮೂರು ಬ್ಯಾಚ್‌ಗಳಿಗೆ ತರಬೇತಿ
  • ಊಟ, ವಸತಿಯನ್ನು ಉಚಿತವಾಗಿ ನೀಡಲಾಗುವುದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಟ್ರಾಕ್ ಸೂಟ್, ಸಮವಸ್ತ್ರಗಳನ್ನು ಉಚಿತವಾಗಿ ನೀಡಲಾಗುವುದು
  • ನಾಲ್ಕು ತಿಂಗಳ ತರಬೇತಿಯಲ್ಲಿ ದೈಹಿಕ ಸಹಿಷ್ಣತೆ ಹಾಗೂ ಲಿಖಿತ ಪರೀಕ್ಷೆಗಳ ಕುರಿತು ತರಬೇತಿ
  • ಈ ತರಬೇತಿಯು ನೌಕಾಸೇನೆ, ಭೂಸೇನೆ, ವಾಯುಸೇನೆ, BSF , CRPF, SSB, NIA, SSF, ITBP ಸೇವೆಗಳಿಗೆ ಸೇರಲು ಅನುಕೂಲ

ದೇಶ ರಕ್ಷಣೆಯ ಸೇವೆಗಳಿಗೆ ಸೇರಬಯಸುವ ಉತ್ತರ ಕರ್ನಾಟಕದ ಹಿಂದುಳಿದ ವರ್ಗಗಳ ಯುವಜನರ ಕನಸಿಗೆ ನೀರೆರೆಯುವ ನಮ್ಮ ಪ್ರಯತ್ನ ಯಶಸ್ವಿಯಾಗಲಿದೆ. ಈ ತರಬೇತಿ ಶಾಲೆಯ ಎರಡನೇ ಬ್ಯಾಚ್ ತರಬೇತಿಗೆ ಚಾಲನೆ ನೀಡಿ, ಅಭ್ಯರ್ಥಿಗಳ ಬಂಕರ್ ಡ್ರಿಲ್ ತರಬೇತಿಯ ಪ್ರದರ್ಶನವು ಸಂತೋಷ ನೀಡಿತು. ಬಾಲ್ಯದಲ್ಲಿ ವಾಯುಸೇನೆಗೆ ಸೇರುವ ನನ್ನ ಪ್ರಯತ್ನಗಳು ಮತ್ತೊಮ್ಮೆ ನೆನಪಿಗೆ ಬಂದವು ಎಂದಿದ್ದಾರೆ.