ಬೇಲೂರು(ಹಾಸನ): ಪಟ್ಟಣದ ಬಸ್ ನಿಲ್ದಾಣದ ಮುಂಭಾಗದ ಪಾಳುಬಿದ್ದ ಖಾಸಗಿ ವಾಣಿಜ್ಯ ಮಳಿಗೆಯ ಸಜ್ಜೆ ಏಕಾಏಕಿ ಕುಸಿತದಿಂದ ಐವರು ಅವಶೇಷದಡಿಯಲ್ಲಿ ಸಿಲುಕಿದ್ದು, ಮೂವರು ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ದುರಂತ ಭಾನುವಾರ ಸಂಭವಿಸಿದೆ.
ಅಮರನಾಥ(೪೫), ನಜೀರ್(೩೮) ಮತ್ತು ಹಣ್ಣಿನ ವ್ಯಾಪಾರಿ ಜ್ಯೋತಿ ಮೃತಪಟ್ಟವರು. ಉಳಿದ ಸೊಪ್ಪಿನ ವ್ಯಾಪಾರಿ ನೀಲಮ್ಮ ಮತ್ತು ಶಿಲ್ಪ ಅವರಿಗೆ ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇವರ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎನ್ನಲಾಗಿದೆ. ಪಾಳುಬಿದ್ದ ವಾಣಿಜ್ಯ ಮಳಿಗೆಗಳು ಶಿಥಿಲವಾದ ನಿಟ್ಟಿನಲ್ಲಿ ಪುನಃ ಕುಸಿಯುವ ಕಾರಣದಿಂದ ಶೀಘ್ರವೇ ಪಾಳುಬಿದ್ದ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.