ವಯಸ್ಸು ಧೃಡೀಕರಣಕ್ಕೆ ಆಧಾರ್‌ ಕಾರ್ಡ್‌ ಅಧಿಕೃತ ಪುರಾವೆಯಲ್ಲ

supreme-court

ನವದೆಹಲಿ: ವ್ಯಕ್ತಿಯ ವಯಸ್ಸನ್ನು ಸಾಬೀತುಪಡಿಸಲು ಆಧಾರ್ ಕಾರ್ಡ್ ಮಾನ್ಯ ದಾಖಲೆಯಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.
ವ್ಯಕ್ತಿಯ ವಯಸ್ಸು ನಿರ್ಧರಿಸುವ ದಾಖಲೆ ಕೊಡಿ ಅಂದ್ರೆ ಆಧಾರ್ ಕಾರ್ಡ್ ಕೊಡಬೇಡಿ. ಅದು ವಯಸ್ಸು ನಿರ್ಧರಿಸುವ ದಾಖಲೆ ಅಲ್ಲ. ವಯಸ್ಸು ನಿರ್ಧರಿಸುವ ದಾಖಲೆ ಎಸ್‌ಎಸ್‌ಎಲ್‌ಸಿ ಸರ್ಟಿಫಿಕೇಟ್ ಎಂಬ ಅಂಶ ದೇಶದ ಗಮನಸೆಳೆದಿದೆ. ಸುಪ್ರೀಂ ಕೋರ್ಟ್‌ ಗುರುವಾರ ನೀಡಿದ ತೀರ್ಪು ಇದಕ್ಕೆ ಕಾರಣ. 2015ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿ ಸಲ್ಲಿದ್ದ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ಈ ಅಂಶವನ್ನು ಎತ್ತಿಹಿಡಿಯಿತು.ವಯಸ್ಸಿನ ದಾಖಲೆಯಾಗಿ ಆಧಾರ್ ಮಾನ್ಯವಲ್ಲ, ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರ ಮಾನ್ಯವಾಗಿರುವ ದಾಖಲೆ ಎಂದು ವಾದ ಮಂಡಿಸಲಾಗಿತ್ತು. ಇದನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿತು.