ಲಾರಿ-ಬೈಕ್ ಮಧ್ಯೆ ಅಪಘಾತ: ಸವಾರ ಸಾವು

ರಬಕವಿ-ಬನಹಟ್ಟಿ ತಾಲೂಕಿನ ಸೈದಾಪೂರ(ಸಮೀರವಾಡಿ) ಬಳಿ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಲಾರಿ ಮಧ್ಯೆ ಬುಧವಾರ ಅಪಘಾತದಲ್ಲಿ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಬಸವ ನಗರದ ನಿವಾಸಿ, ಡೆಂಪೋಡೇರಿಯ ನಿವೃತ್ತ ನೌಕರ ಸುರೇಶ ಕೊಲ್ಲಾಪೂರ(65) ಮೃತ ದುರ್ದೈವಿ.

ಗೋಕಾಕದಲ್ಲಿ ಜರುಗುತ್ತಿರುವ ಹುಲಿಗೆಮ್ಮದೇವಿ ಜಾತ್ರೆ ಮುಗಿಸಿಕೊಂಡು ಬುಧವಾರ ಸಂಜೆ 4 ಗಂಟೆ ಸುಮಾರಿಗೆ ತನ್ನ ಊರಾದ ಬನಹಟ್ಟಿ ಕಡೆಗೆ ಒಬ್ಬರೇ ಬರುವಾಗ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ತನಿಖೆ ಮುಂದುವರೆಸಿದ್ದಾರೆ.

ಈ ಕುರಿತು ಮಹಾಲಿಂಗಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಳಗವಿದೆ.