ಲಾರಿ ಅಡಿ ಸಿಲುಕಿ ಅಪ್ಪಚ್ಚಿಯಾದ ಕಾರು: ಪವಾಡ ರೀತಿಯಲ್ಲಿ ಚಾಲಕ ಪಾರು

ಬೆಂಗಳೂರು: ಇಂದು ಬೆಳಗ್ಗೆ ನಡೆದ ಅಪಘಾತದಲ್ಲಿ ಲಾರಿ ಅಡಿ ಕಾರು ಸಿಲುಕಿ ಅಪ್ಪಚ್ಚಿಯಾದ ಘಟನೆ ನಡೆದಿದೆ.
ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ-48ರ ಗುಂಡೇನಹಳ್ಳಿ ಲಾರಿ ಹಾಗೂ ಕಾರು ಅಪಘಾತ ಸಂಭವಿಸಿದ್ದು. ಲಾರಿ ಕೆಳಗೆ ಸಿಲುಕಿ ಕಾರು ನಜ್ಜುಗುಜ್ಜಾಗಿದೆ ಆದರೆ ಕಾರಿನ ಚಾಲಕ ಪವಾಡ ರೀತಿಯಲ್ಲಿ ಪಾರಾಗಿದ್ದಾರೆ, ಇನ್ನು ಕಾರ ಚಾಲಕನನ್ನು ತುಮಕೂರು ಜಿಲ್ಲೆಯ ಸೇಲ್ಸ್ ಟ್ಯಾಕ್ಸ್ ಕಚೇರಿಯ ಕಾರು ಚಾಲಕ ಎನ್ನಲಾಗಿದೆ, ನೆಲಮಂಗಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.