ರೇಷ್ಮೆ ಇಲಾಖೆ ಸೇವೆಗಳ ಮಾಹಿತಿಗೆ ಮೊಬೈಲ್ ನಂಬರ್ ಬಿಡುಗಡೆ

ಸಂ.ಕ ಸಮಾಚಾರ, ಕೋಲಾರ
ರೇಷ್ಮೆ ಇಲಾಖೆ ಸಮಸ್ಯೆಗಳು ಮತ್ತು ರೇಷ್ಮೆ ಗೂಡು ವಹಿವಾಟಿನ ವಿಚಾರದಲ್ಲಿ ರೈತರ ಮತ್ತು ರೀಲರುಗಳ ಅನುಕೂಲಕ್ಕಾಗಿ ರೇಷ್ಮೆ ಇಲಾಖೆಯು ಮೊಬೈಲ್ ನಂಬರನ್ನು ಬಿಡುಗಡೆ ಮಾಡಿದೆ.

ರೇಷ್ಮೆ ಕೃಷಿ ಅಭಿವೃದ್ದಿ ಆಯುಕ್ತೆ ವಿನೋತ್ ಪ್ರಿಯಾ ಹೇಳಿಕೆ ನೀಡಿ ರೇಷ್ಮೆ ಗೂಡು ಧಾರಣೆ ಹಾಗೂ ಮಾರುಕಟ್ಟೆಯ ಸ್ಥಿತಿಗತಿಗಳನ್ನು ರೈತರು ಮತ್ತು ರೀಲರುಗಳು  ತಿಳಿಯುವುದಕ್ಕಾಗಿ ಮೊಬೈಲ್ ನಂಬರ್ ೯೪೮೦೨೦೨೩೨೬ ಅನ್ನು ಬಳಕೆ ಮಾಡಿಕೊಳ್ಳಬಹುದು. ಎಂದು ವಿವರಿಸಿದ್ದಾರೆ.
ಈ ನಂಬರ್ ಮೂಲಕ ವಾಟ್ಸ್ ಆಪ್, ಫೇಸ್ ಬುಕ್, ಇನ್ಸ್ ಸ್ಟಾಗ್ರಾಂ, ಯೂಟ್ಯೂಬ್, ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ರೈತರು ಮತ್ತು ರೀಲರ್‌ಗಳು ಸಹಾ ಸೇವೆಯನ್ನು ಇನ್ನಷ್ಟು ಸುಗಮಗೊಳಿಸಲು ಸಲಹೆ ನೀಡಬಹುದು ಎಂದು  ಕೋರಿದ್ದಾರೆ.