ಸಂ. ಕ. ಸಮಾಚಾರ, ಮಂಗಳೂರು: ಜೂನ್ ೨೫ ರಿಂದ ೨೮ ರವರೆಗೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆದ ೨೦ನೇ ರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್ನಲ್ಲಿ ಮಂಗಳೂರು ಮೂಲದ ಅಣ್ಣ-ತಂಗಿ ಅದ್ಭುತ ಸಾಧನೆ ಮೆರೆದಿದ್ದಾರೆ.ತಮ್ಮ ಅಮೋಘ ಆಟದ ಮೂಲಕ ಡೇನಿಯಲ್ ಕೊನ್ಸೆಸಾವ್ ಹಾಗೂ ಡ್ಯಾಶಿಯಲ್ ಕೊನ್ಸೆಸಾವ್ ಪದಕದ ಸಾಧನೆ ಮೆರೆದಿದ್ದಾರೆ.
ಡ್ಯಾಶಿಯಲ್ ಕೊನ್ಸೆಸಾವ್ ೨ ಚಿನ್ನ (೫೦೦ ಮೀ. & ೧೦೦೦ ಮೀ.) ಮತ್ತು ೧ ಬೆಳ್ಳಿ (೧೫೦೦ ಮೀ.) ಪದಕಗಳನ್ನು ಪಡೆದರೆ, ಇವರ ಸಹೋದರ ಡೇನಿಯಲ್ ಕೊನ್ಸೆಸಾವ್ ೧೫೦೦ ಮೀ. ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ.
ಇವರು ಮಂಗಳೂರಿನ ಫ್ರಾನ್ಸಿಸ್ ಕೊನ್ಸೆಸಾವ್ ಮತ್ತು ಡೋರಿಸ್ ಕೊನ್ಸೆಸಾವ್ ದಂಪತಿಯ ಮಕ್ಕಳಾಗಿದ್ದು, ಡೇನಿಯಲ್ ಕೊನ್ಸೆಸಾವ್ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ವಿದ್ಯಾಭ್ಯಾಸ ಪಡೆಯುತ್ತಿದ್ದರೆ, ಡ್ಯಾಶಿಯಲ್ ಎಸ್ಡಿಎಂ ಕಾಲೇಜಿನ ಬಿಬಿಎ ವಿದ್ಯಾರ್ಥಿನಿಯಾಗಿದ್ದಾಳೆ. ಇವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ತರಬೇತುದಾರರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.