ರಾತ್ರಿ ಮಲಗಿದ್ದ ವೇಳೆ ಹಾವು ಕಚ್ಚಿ ಬಾಲಕಿ ಸಾವು

ವಿಜಯಪುರ(ಹೂವಿನ ಹಿಪ್ಪರಗಿ): ತೋಟದ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿ ಬಾಲಕಿಯೋರ್ವಳು ಸಾವನ್ನಪ್ಪಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದಲ್ಲಿ ನಡೆದಿದೆ.
ಬಾಲಕಿ ಇಂಪನಾ ಕೊಂಡುಗುಳಿ (7) ಪೋಷಕರೊಡನೆ ಮಲಗಿದ್ದಾಗ ರಾತ್ರಿ 1.30ರ ಸುಮಾರಿಗೆ ಹಾವು ಕಚ್ಚಿದೆ. ಏನೋ ಕಚ್ಚಿದೆ ಎಂದು ಪಾಲಕರಿಗೆ ತಿಳಿಸಿದ್ದಾಳೆ. ಹುಳು ಕಚ್ಚಿರಬಹುದು ಎಂದು ಮತ್ತೆ ಮಲಗಿಸಿದ್ದಾರೆ.
ನಂತರ ರಾತ್ರಿ 3 ಗಂಟೆ ಸುಮಾರಿಗೆ ಬಾಲಕಿ ಇಂಪನಾ ಬಾಯಿಂದ ನೊರೆ ಬರಲು ಪ್ರಾರಂಭಿಸಿದೆ. ಬಾಯಿ ಊತ ಹೆಚ್ಚಾಗತೊಡಗಿದೆ. ತಕ್ಷಣ ಬಾಲಕಿ ತಂದೆ ಸಂತೋಷ ಅವಳನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಇಂಪನಾ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ.
ರೇಖಾ ಹಾಗೂ ಸಂತೋಷ ಕೊಂಡಗೂಳಿ ದಂಪತಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರರಿದ್ದು, ಇಂಪನಾ ಕೊನೆಯವಳಾಗಿದ್ದಳು.