ಕೊಪ್ಪಳ: ಬಿ.ಎಸ್. ಯಡಿಯೂರಪ್ಪ ನಾನು ಅಣ್ಣ- ತಮ್ಮಂದಿರಿದ್ದಂತೆ. ನನ್ನ ಜನ್ಮದಿನಕ್ಕೆ ಯಡಿಯೂರಪ್ಪ ಮತ್ತು ಪುತ್ರ ರಾಘವೇಂದ್ರ ಶುಭ ಕೋರಿದರು. ನಾನು ಅನಾರೋಗ್ಯಗೊಂಡಾಗ ಆರೋಗ್ಯ ವಿಚಾರಿಸಿದರು. ರಾಜಕಾರಣ ಬೇರೆ, ವೈಯಕ್ತಿಕ ಸ್ನೇಹ ಬೇರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ವೈಯಕ್ತಿಕ ಸ್ನೇಹಕ್ಕೂ, ರಾಜಕಾರಣಕ್ಕೂ ಸಂಬಂಧವಿಲ್ಲ. ನಾನು ವೈಯಕ್ತಿಕವಾಗಿ ವಿರೋಧಿಸುವುದಿಲ್ಲ. ಪಕ್ಷ ಅವರ ಕುಟುಂಬದ ಹಿಡಿತದಲ್ಲಿದೆ. ಸದ್ಯಕ್ಕೆ ನಾನು ಬಿಜೆಪಿಗೆ ಹೋಗುವುದಿಲ್ಲ. ಮುಂದೆ ಹೋಗುತ್ತೇನೆ. ಕತ್ತುಕೊಯ್ದರೂ ನಾನು ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಘೋಷಿಸಿದರು.