ಮೊದಲ ಟಿ20: ಶುಭಾರಂಭ

ಢಾಕಾ: ಭಾರತದ ವನಿತೆಯರ ತಂಡವು ಬಾಂಗ್ಲಾ ವನಿತೆಯರ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಜಯ ಸಾಧಿಸಿದೆ. ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಬಾಂಗ್ಲಾ ತಂಡವು 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 114 ರನ್ ಮಾಡಿದರೆ, ಭಾರತವು ಮೂರು ವಿಕೆಟ್ ನಷ್ಟಕ್ಕೆ 16.2 ಓವರ್‌ಗಳಲ್ಲಿ 118 ರನ್‌ ಮಾಡಿ ಗುರಿ ತಲುಪಿತು ಇದರೊಂದಿಗೆ ಪ್ರವಾಸಲ್ಲಿ ಶುಭಾರಂಭ ಮಾಡಿದೆ.