ಮೈಕ್ರೋ ಫೈನಾನ್ಸ್‌ ಕಿರುಕುಳ: ವ್ಯಕ್ತಿ ಆತ್ಮಹತ್ಯೆ

ಆತ್ಮಹತ್ಯೆ

ಗದಗ: ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಬೆಟಗೇರಿಯ ನರಸಾಪೂರದ ಆಶ್ರಯ ಕಾಲೋನಿಯಲ್ಲಿ ಇಂದು ಸಂಜೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಉಮೇಶ ಕಾಟವಾ(40) ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಬಿಎಸ್‌ಎಸ್ ಫೈನಾನ್ಸ್, ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಸೇರಿದಂತೆ ಇತರೆ ಮೈಕ್ರೋ ಫೈನಾನ್ಸ್‌ನಲ್ಲಿ ಸುಮಾರು 1.50 ಲಕ್ಷ ರೂಪಾಯಿ ಸಾಲ ಪಡೆದಿದ್ದನೆನ್ನಲಾಗಿದೆ. ಸಾಲ ಮರುಪಾವತಿಸುವಂತೆ ಫೈನಾನ್ಸ್‌ ಕಂಪನಿಗಳ ಪ್ರತಿನಿಧಿಗಳು ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ.
ಬೆಳಗ್ಗೆ ಮನೆ ಬಳಿ ಬಂದು ಮನೆಯಲ್ಲಿ ಸಾಕಿದ್ದ ಮೇಕೆ ಮಾರಾಟ ಮಾಡಿ ಸಾಲ ತೀರಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಒತ್ತಾಯಿಸಿದ್ದರು. ಸಾಲ ತೀರಿಸುವ ಒತ್ತಡದಲ್ಲಿದ್ದ ಉಮೇಶ್‌ ಹಣ ಹೊಂದಿಸಲು ಪರದಾಡಿದ್ದ. ಸಂಜೆ ಹಣ ಹೊಂದಿಸಲಾಗದೆ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಮನೆಯಲ್ಲಿ ಬಟ್ಟೆ ವ್ಯಾಪಾರ ಮಾಡಲು ಸಾಲ ಪಡೆದಿದ್ದರು. ಹೆಂಡತಿ ಬ್ಯಾಂಕ್‌ಗೆ ಹೋಗಿ ಬರುವಷ್ಟರಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಟ್ಟೆ ವ್ಯಾಪಾರ ಸರಿಯಾಗಿ ನಡೆಯದ್ದರಿಂದ ಉಮೇಶ ಕಾಟವಾ ಗಾರೆ ಕೆಲಸಕ್ಕೆ ಹೋಗುತ್ತಿದ್ದನೆಂದು ತಿಳಿದು ಬಂದಿದೆ. ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.