ಮಹಿಳೆಯರಲ್ಲಿ ಒಂದು ಕಾಲಘಟ್ಟ ಕಳೆದರೆ ಹೆಚ್ಚು ಕಾಡುವ ಸಮಸ್ಯೆ ಎಂದರೆ ಸಣ್ಣ ಪ್ರಮಾಣದಲ್ಲಿ ಮೂತ್ರ ವಿಸರ್ಜನೆಯಾಗುವುದು. ಇದರಿಂದ ಮಹಿಳೆಯರು ಮುಜುಗರಕ್ಕೆ ಒಳಗಾಗುತ್ತಾರೆ. ವಯಸ್ಸು, ಅಭ್ಯಾಸಗಳು, ವೈದ್ಯಕೀಯ ಪರಿಸ್ಥಿತಿಗಳು ಮತ್ತು ಕೆಲವು ಜೀವನ ಸನ್ನಿವೇಶಗಳಂತಹ ಅಂಶಗಳು ಸ್ನಾನ ಗೃಹದಲ್ಲಿ ಹೆಚ್ಚು ಸಮಯ ಕಳೆಯುವಂತೆ ಮಾಡಬಹುದು. ಕೆಲವೊಮ್ಮೆ ಆಗಾಗೆ ಮೂತ್ರ ವಿಸರ್ಜನೆ ಸಾಮಾನ್ಯ ಮತ್ತು ತಾತ್ಕಾಲಿಕವಾಗಿರಬಹುದು,
ಗರ್ಭಿಣಿಯಾದ ಸಂದರ್ಭದಲ್ಲಿ ಮೂತ್ರ ವಿಸರ್ಜನೆ ಆಗುವುದು ಸಾಮಾನ್ಯ. ಕೆಲವೊಂದು ಕಾರಣಗಳಿಂದ ಮೂತ್ರ ವಿಸರ್ಜನೆ ಆಗುವುದು. ಕೆಲವರು ಹೆಚ್ಚಾಗಿ ದ್ರವ ಆಹಾರ ವಸ್ತುಗಳನ್ನು ಬಳಸುತ್ತಾರೆ. ಆ ಸಂದರ್ಭದಲ್ಲಿ ನಮ್ಮ ದೇಹವು ಬಳಸದೆ ಇರುವ ವಸ್ತುಗಳನ್ನು ತೆಗೆದುಹಾಕುತ್ತದೆ. ಇದು ಸ್ವಾಭಾವಿಕವಾಗಿ ಹೆಚ್ಚು ಹೆಚ್ಚು ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ. ಆಲ್ಕೋಹಾಲ್, ಕೆಫಿನ್ ಅಥವಾ ಇತರ ಮೂತ್ರವರ್ಧಕಗಳನ್ನು ಸೇವಿಸುವ ಅಭ್ಯಾಸವಿದ್ದರೆ, ಸಿಟ್ರಿಸ್ ಹಣ್ಣುಗಳು ಅಥವಾ ಟೊಮೊಟೊಗಳನ್ನು ಒಳಗೊಂಡಿರುವ ಆಮ್ಲಿಯ ಆಹಾರಗಳು ಮತ್ತು ಪಾನೀಯಗಳು ಮೂತ್ರ ಹೆಚ್ಚು ವಿಸರ್ಜನೆ ಆಗುವಂತೆ ಮಾಡುತ್ತದೆ.
ಮತ್ತೊಂದು ಕಾರಣವೆಂದರೇ ಮೂತ್ರನಾಳದ ಸೋಂಕು. ಹೆಚ್ಚಿನ ಮಹಿಳೆಯರು ತಮ್ಮ ಜೀವನದ ಯಾವುದೋ ಹಂತದಲ್ಲಿ ಕನಿಷ್ಠ ಒಂದು ಬಾರಿಯಾದರೂ ಮೂತ್ರನಾಳದ ಸೋಂಕಿಗೆ ಒಳಗಾಗುತ್ತಾರೆ. ಬೇರೆ ಯಾವುದೇ ಮೂತ್ರನಾಳದ ವ್ಯವಸ್ಥೆಯ ಭಾಗಗಳಿಗೆ ಬ್ಯಾಕ್ಟೀರಿಯಾ ಮೂಲಕ ಸೋಂಕು ತಗಲಿದಾಗ ಪದೇ ಪದೇ ಮೂತ್ರ ವಿಸರ್ಜನೆ ಸಂಭವಿಸುತ್ತವೆ. ಇದರಲ್ಲಿ ಮೂತ್ರ ವಿಸರ್ಜನೆಯದರ ಜೊತೆಗೆ ಜ್ವರ ಮೂತ್ರ, ಸುಡುವ ಸಂವೇದನೆ ಮೂತ್ರ, ಬಣ್ಣಮಾಸುವುದು ಮತ್ತು ಮೂತ್ರ ವಿಸರ್ಜನೆ ಮಾಡಬೇಕು ಎಂಬ ಭಾವನೆ ಮೂತ್ರ (ವಿಸರ್ಜನೆ ನಂತರವೂ ಸೇರಿವೆ) ಮೂತ್ರಕೋಶದ ತೊಂದರೆಯಿಂದ ಅಥವಾ ಒತ್ತಡ, ಬೆನ್ನಿನಲ್ಲಿ ಸೊಂಟದ ಸುತ್ತಲೂ ಅಸ್ವಸ್ಥತೆಯನ್ನು ಅನುಭವಿಸಬಹುದು. ಯೋನಿನಾಳದ ಉರಿಯೂತ, ಅತಿಕ್ರಿಯ ಮೂತ್ರಕೋಶ, ಮೂತ್ರಕೋಶದ ಕಲ್ಲುಗಳು, ಗರ್ಭಧಾರಣೆ ಒತ್ತಡ ಮತ್ತು ಆತಂಕ, ಸ್ತ್ರೀ ಲೈಂಗಿಕ ಕ್ರಿಯಾಶೀಲೆ ಕಡಿಮೆಯಾದರೆ(ದೇಹದಲ್ಲಿರುವ ಹಾರ್ಮೋನ್ ಬದಲಾವಣೆ), ಮಧುಮೇಹ, ಹೀಗೆ ಹಲವಾರು ಕಾರಣಗಳಿಂದ ಅತೀ ಬಾರಿ ಮೂತ್ರ ವಿಸರ್ಜನೆಯಾಗುತ್ತದೆ. ಮಹಿಳೆಯರು ತಮ್ಮ ದೇಹದ ಆರೈಕೆ ಕಡೆಗೆ ಒತ್ತು, ಉತ್ತಮ ಆಹಾರದ ಬಗ್ಗೆ ಹೆಚ್ಚು ಮಹತ್ವ ನೀಡಿದರೆ ಇಂತಹ ಮುಜುಗರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಸಮಸ್ಯೆ ಸಣ್ಣದಿರುವಾಗ ಮನೆಮದ್ದಿನಿಂದ ಪ್ರಾರಂಭ ಮಾಡುವುದು ಉತ್ತಮ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ತುಳಸಿ ಗಿಡವಿರುತ್ತದೆ. ತುಳಸಿ ವಿವಿಧ ವೈರಸ್‌ಗಳ ಶಿಲಿಂದ್ರಗಳು ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಕೆಲವು ತುಳಸಿ ಎಲೆಗಳನ್ನು ಪುಡಿ ಮಾಡಿ ಸ್ವಲ್ಪ ಪ್ರಮಾಣದ ಜೇನುತುಪ್ಪದೊಂದಿಗೆ ತಿನ್ನುವುದು ಇದರಿಂದ ಮೂತ್ರಪಿಂಡ ಅಥವಾ ಯೋನಿಯಲ್ಲಿ ಮೂಡುವ ಬ್ಯಾಕ್ಟೀರಿಯ ಸೋಂಕು ಕಡಿಮೆಯಾಗುತ್ತದೆ. ಅಡುಗೆ ಮನೆಯಲ್ಲಿರುವ ಜೀರಿಗೆ ಒಂದು ಮನೆಮದ್ದು ಎನ್ನಬಹುದು. ಪರಿಮಳಯುಕ್ತ ಮೂಲಿಕೆಯಾದ ಜೀರಿಗೆಯ ಶರಬತ್ತು ಅಥವಾ ತೈಲವೋ ಮೂತ್ರನಾಳದ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯದ ವಿರುದ್ಧ ಪ್ರತಿಕ್ರಿಯಿಸುತ್ತದೆ, ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಸೇವಿಸಿದರೆ ಸಲೀಸಾಗಿ ಮೂತ್ರ ವಿಸರ್ಜನೆಗೆ ಸಹಾಯವಾಗುತ್ತದೆ ಮೂತ್ರದ ನಂತರ ದುರ್ವಾಸನೆ ಬರುವುದು ಕಡಿಮೆಯಾಗುತ್ತದೆ. ಹೆಚ್ಚಿನ ವಿಟಮಿನ್ ಸಿ ಅಂಶವನ್ನು ಹೊಂದಿರುವ ಆಮ್ಲ ಎಂದರೆ ಬೆಟ್ಟದ ನೆಲ್ಲಿಕಾಯಿ, ಕಿತ್ತಳೆ, ನಿಂಬೆಹಣ್ಣು, ಮೂಸಂಬಿ ಪಾನಕ ವನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಉತ್ತಮ ಮೂತ್ರಕೋಶದ ನಿಯಂತ್ರಣಕ್ಕೆ ಅಗತ್ಯವಾದ ವ್ಯಾಯಾಮ ಮಾಡುವುದು ತುಂಬಾನೇ ಮುಖ್ಯ. ಕೇಗಲ್ ವ್ಯಾಯಮವನ್ನು ನಿಯಮಿತವಾಗಿ ಮಾಡುವುದು ಮೂತ್ರ ವಿಸರ್ಜನೆಯ ತುರ್ತುಸ್ಥಿತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಅತೀ ಮೂತ್ರ ವಿಸರ್ಜನೆಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವಂತೆ ಅದು ಯೋನಿಯ ಸ್ನಾಯುಗಳನ್ನು ಹಿಸುಕಿ ಹಾಕುವ ಕೇಗಲ್ ವ್ಯಾಯಾಮವನ್ನು ಮಾಡಿದಲ್ಲಿ ಉತ್ತಮ. ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಈ ಕೇಗಲ್ ಭಂಗಿಯಲ್ಲಿ ಮೂರು ಅಥವಾ ಐದು ಸೆಕೆಂಡ್‌ಗಳ ಕಾಲ ಹಿಡಿದುಕೊಳ್ಳಿ.ನಂತರ ಇದೇ ವ್ಯಾಯಾಮವನ್ನು ೧೦ ಬಾರಿ ಪುನರ್ ವರ್ತಿಸಿ.ಈ ರೀತಿಯಿಂದ ಮಹಿಳೆಯರಲ್ಲಿ ಕಾಣುವ ಮೂತ್ರ ವಿಸರ್ಜನೆ ಕಡಿಮೆಯಾಗುತ್ತದೆ, ಹಾಗೂ ಆರೋಗ್ಯಕರ ಯೋನಿಗೂ ಉತ್ತಮ.
ಒಳ್ಳೆಯ ಜೀವನ ಶೈಲಿ ಬದಲಾವಣೆಯಿಂದ ರೋಗ ಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯಮಾಡುವ ಹಲವಾರು ಮನೆ ಮದ್ದುಗಳು ಮತ್ತು ಜೀವನ ಶೈಲಿಯಲ್ಲಿ ಅಳವಡಿಸಿಕೊಂಡು ಉತ್ತಮ ಹಾಗೂ ನಿರ್ದಿಷ್ಟ ಪರಿಸ್ಥಿತಿಗೆ ಹೆಚ್ಚು ಒತ್ತು ಕೊಟ್ಟು ಸೂಕ್ತವಾದ ವಿಧಾನವನ್ನು ನಿರ್ಧರಿಸಲು ಆರೋಗ್ಯ ವೃತ್ತಿ ಪರರೊಂದಿಗೆ ಸಮಾಲೋಚಿಸುವುದು ಅತ್ಯಗತ್ಯ ತಾಳ್ಮೆ ಮತ್ತು ಸ್ಥಿರತೆ ಪ್ರಮುಖವಾಗಿದೆ ಇದರಿಂದ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು.