ಮಾರ್ಚ್ 23ಕ್ಕೆ ಬಿಡದಿ ಹಾಫ್ ಮ್ಯಾರಥಾನ್

ಸುರಕ್ಷತೆ ಮತ್ತು ಸುಸ್ಥಿರತೆಯ ಘೋಷವಾಖ್ಯದೊಂದಿಗೆ ಓಟ

ರಾಮನಗರ: ಸುರಕ್ಷತೆ ಮತ್ತು ಸುಸ್ಥಿರತೆಯ ಮಹತ್ವಾಕಾಂಕ್ಷೆಯೊಂದಿಗೆ ಟೊಯೊಟಾ ಬಿಡದಿ ಹಾಫ್ ಮ್ಯಾರಥಾನ್‌ನ ಎರಡನೇ ಆವೃತ್ತಿಯನ್ನು ಮಾರ್ಚ್ 23 ರಂದು ಹಮ್ಮಿಕೊಳ್ಳಲಾಗಿದೆ.

ಬಿಡದಿ ಹಾಫ್ ಮ್ಯಾರಥಾನ್ ಅನ್ನು ಬಿಡದಿ ಇಂಡಸ್ಟ್ರಿಯಲ್ ಅಸೋಸಿಯೇಷನ್ ಮತ್ತು ಬಿಐಎ ಫೌಂಡೇಷನ್ ಆಯೋಜಿಸುತ್ತಿದೆ. ಪ್ರಕೃತಿ ಮತ್ತು ಸಮುದಾಯದೊಂದಿಗೆ ಆಚರಿಸುವ ಜೊತೆಗೆ ದೈಹಿಕ ಫಿಟ್‌ನೆಸ್ ಅನ್ನು ಉತ್ತೇಜಿಸುವ ಸಲುವಾಗಿ ಮ್ಯಾರಥಾನ್‌ಅನ್ನು ಹಮ್ಮಿಕೊಳ್ಳಲಾಗಿದೆ.

ಕಳೆದ 2024ರ ಮಾರ್ಚ್‌ನಲ್ಲಿ ನಡೆದ ಮೊದಲ ಆವೃತ್ತಿಯ ಟೊಯೊಟಾ ಬಿಡದಿ ಹಾಫ್ ಮ್ಯಾರಥಾನ್ ಅದ್ಭುತ ಯಶಸ್ಸು ಸಾಧಿಸುವ ಮೂಲಕ ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸಿತ್ತು. ಮೊದಲ ಆವೃತ್ತಿಯಲ್ಲಿ 3 ಸಾವಿರಕ್ಕೂ ಅಧಿಕ ಓಟಗಾರರು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಇದು ಸ್ಥಳೀಯ ಸಮುದಾಯಗಳು, ಉದ್ಯೋಗಿಗಳು, ಕುಟುಂಬ ಸದಸ್ಯರು ಮತ್ತು ಕೈಗಾರಿಕೆಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಂದ ಅಗಾಧ ಪ್ರತಿಕ್ರಿಯೆಗೆ ಸಾಕ್ಷಿಯಾಯಿತು.

ಈ ಬಾರಿಯೂ ಬಿಡದಿ ಹಾಫ್ ಮ್ಯಾರಥಾನ್ ಆಯೋಜನೆಗೊಳ್ಳುತ್ತಿದ್ದು, ಬೆಂಗಳೂರಿನ ರಮಣೀಯ ಹೊರವಲಯದಲ್ಲಿ ರೋಮಾಂಚಕ ಓಟದ ಅನುಭವ ಪಡೆಯಲು ಮ್ಯಾರಥಾನ್‌ನಲ್ಲಿ ಭಾಗವಹಿಸಬಹುದು. ಈ ಹಾಫ್ ಮ್ಯಾರಥಾನ್ ಜಾಲಿವುಡ್ ಸ್ಟುಡಿಯೋ, ಬಿಡದಿ ಇಲ್ಲಿಂದ ಆರಂಭವಾಗಲಿದ್ದು, 3 ಕಿಮೀ, 5 ಕಿ.ಮೀ, 10 ಕಿ.ಮೀ ಹಾಗೂ 21 ಕಿ.ಮೀ ವಿಭಾಗದಲ್ಲಿ ಹಾಪ್ ಮ್ಯಾರಥಾನ ಹಮ್ಮಿಕೊಳ್ಳಲಾಗಿದೆ. ಕಡಿಮೆ ವಾಹನ ಸಂಚಾರವಿರುವ ಮತ್ತು ಮರಗಿಡಗಳ ಸಾಲಿರುವ ದೊಡ್ಡ ರಸ್ತೆಯ ಆಹ್ಲಾದಕರ ಮಾರ್ಗದಲ್ಲಿ ಈ ಮ್ಯಾರಥಾನ್‌ಅನ್ನು ಆಯೋಜಿಸಲಾಗಿದೆ.

ಸುರಕ್ಷತೆ ಮತ್ತು ಸುಸ್ಥಿರತೆ ಘೋಷವಾಖ್ಯದೊಂದಿಗೆ ಹಮ್ಮಿಕೊಂಡಿರುವ ಈ ಓಟದಲ್ಲಿ ಹೆಚ್ಚು ಆಕರ್ಷಣೆಗಳು ಲಭ್ಯವಿದೆ. ಈ ಮಾರ್ಗದಲ್ಲಿ ಸುಸಜ್ಜಿತ ನೀರಿನ ಸೌಕರ್ಯ ಮತ್ತು ನ್ಯೂಟ್ರೀಷಿಯನ್ ಸಪೋರ್ಟ್ ದೊರೆಯಲಿದೆ. ಆಕರ್ಷಕ ಫಿನಿಷರ್ ಪದಕ, ಪ್ರಸಿದ್ಧ ಬಿಡದಿ ಉಪಹಾರ ವ್ಯವಸ್ಥೆ, ಸ್ಮರಣಾರ್ಥ ಟಿ ಶರ್ಟ್ ಲಭ್ಯವಿದೆ.