ಬೆಳಗಾವಿ: ಬೆಳಗಾವಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮಾಜಿ ಕೇಂದ್ರ ಸಚಿವ ದಿ. ಬಿ. ಶಂಕರಾನಂದ ಅವರ ಒಡೆತನದ ಆಸ್ತಿಗೆ ಕನ್ನ ಹಾಕಿರುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸದಾಶಿವನಗರದ ಡಾ. ಜಯಶ್ರೀ ಬಿ. ಶಂಕರಾನಂದ ಅವರ ಒಡೆತನದ ಆಸ್ತಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದ 8 ಮಂದಿ ವಿರುದ್ಧ ಬೆಳಗಾವಿ ಖಡೇಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದಾಶಿವನಗರದ ಸರ್ವೇ ನಂ. 1416 ನಲ್ಲಿರುವ ಸುನೀಳಶಿವಪ್ಪ ತಳವಾರ ಎಂಬುವವರು ನಕಲಿ ದಾಖಲೆ ಸೃಷ್ಟಿಸಿ ಗುಂಟೆ ಖಾಲಿ ಜಮೀನನ್ನು ನೂರಮಹಮ್ಮದ್ ಎಂಬುವರಿಗೆ ಮಾರಾಟ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿ 2024ರಲ್ಲಿ ಆಸ್ತಿ ಕಬಳಿಕೆ ಮಾಡಿಕೊಳ್ಳಲಾಗಿದೆ.
ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದ ಸುನೀಲ ತಳವರ, ಆಜಂ ನಗರದ ಆಯೂಬ್ ಮಹಮ್ಮದ್, ಪಾರ್ಥನಹಳ್ಳಿಯ ರಾಜು ವರ್ಗಿಸ್, ಮಲ್ಲಿಕ ಜಾನ್ ಮಬ್ಬಾನಿ, ಮೋಹನ ಶಿಂಧೆ, ಸುಳೇಬಾವಿಯ ಇಸ್ಮಾಯಿಲ್ ಸವಸುದ್ದೀನ ಹಾಗೂ ಅಂದಿನ ಸಬ್ ರಿಜಿಸ್ಟ್ರಾರ್ ಮತ್ತು ಜಿಲ್ಲಾ ನೋಂದಣಾಧಿಕಾರಿಗಳ ವಿರುದ್ಧ ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಜಿ ಕೇಂದ್ರ ಸಚಿವ ಶಂಕರಾನಂದ ಅವರು ಕುಟುಂಬ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.