ಮಳೆಯ ನಡುವೆ ಸರಕಾರದ ಸಾಧನಾ ಸಮಾವೇಶ


ಹೊಸಪೇಟೆ: ಮಳೆಯ ಅಬ್ಬರದ ‌ನಡುವೆಯೇ ಹೊಸಪೇಟೆಯಲ್ಲಿ ಆಯೋಜನೆ ಮಾಡಿದ ರಾಜ್ಯ ಸರಕಾರದ ಎರಡು ವರ್ಷದ ಸಾಧನೆ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯುತ್ರಿದೆ.
ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡುತ್ತಿದ್ದ ವೇಳೆಯೇ ಜೋರಾಗಿ ಮಳೆ ಶುರುಯಿತು. ಮಳೆಯಿಂದ ಕೆಲವರಿಗೆ ತೊಂದರೆಯಾಗುತ್ತಿದೆ. ಜರ್ಮನ್ ಟೆಂಟ್ ಕಡೆಯಲ್ಲಿ ಕುಳಿತುಕೊಳ್ಳಿ. ಯಾರೂ ಹೋಗುವುದು ಬೇಡ ಎಂದು ಮನವಿ ಮಾಡಿಕೊಂಡರು.


ಹೆಲಿಕ್ಯಾಪ್ಟರ್ ರದ್ದು: ಇನ್ನು ಎಐಸಿಸಿ ವರಿಷ್ಠ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನಿಂದ ತೋರಣಗಲ್ ಗೆ ವಿಶೇಷ‌ ವಿಮಾನದ ಮೂಲಕ‌‌‌ ಆಗಮಿಸಿ‌ ಅಲ್ಲಿಂದ ಹೊಸಪೇಟೆಗೆ ಹೆಲಿಕ್ಯಾಪ್ಟರ್ ಮೂಲಕ ಬರಬೇಕಿತ್ತು. ಆದರೆ ಮಳೆಯ ಕಾರಣ ಹೆಲಿಕ್ಯಾಪ್ಟರ್ ಸೇವೆ ರದ್ದುಗೊಳಿಸಲಾಯಿತು. ತೋರಗಲ್ನಿಂದ ರಸ್ತೆ‌ ಮಾರ್ಗವಾಗಿಯೇ ಎಲ್ಲ ನಾಯಕರು ಆಗಮಿಸಬೇಕಾಯಿತು.