ದಾಂಡೇಲಿ : ನನ್ನ ಕ್ಷೇತ್ರದಲ್ಲಿ ಮನೆ ಹಂಚಿಕೆ ವಿಚಾರದಲ್ಲಿ ಅಧಿಕಾರಿಗಳಿಂದಾಗಲಿ, ಜನಪ್ರತಿನಿಧಿಗಳಿಂದಾಗಲಿ ಯಾವುದೇ ಲೋಪ ಸಂಭವಿಸಿದರೆ ಸುಮ್ಮನಿರುವುದಿಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು, ಶಾಸಕರಾದ ಆರ್.ವಿ ದೇಶಪಾಂಡೆ ಖಡಕ್ ಎಚ್ಚರಿಕೆ ಯನ್ನು ನೀಡಿದರು. ಅವರು ಬುಧವಾರ ಮಧ್ಯಾಹ್ನ ಕುಂಬಾರವಾಡದಲ್ಲಿ 70 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಗ್ರಾಮ ಪಂಚಾಯತ್ ಕಛೇರಿ ಕಟ್ಟಡವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಂದುವರೆದು ಮಾತನಾಡಿದ ಅವರು ಯಾರಿಗೆ ಮನೆ ಅವಶ್ಯಕತೆ ಇದೆಯೋ ಅಂತಹ ಸೂಕ್ತ ಫಲಾನುಭವಿಯನ್ನು ಗುರುತಿಸಿ ಮನೆ ಹಂಚಿಕೆ ಮಾಡಿ, ದೂರುಗಳು ಬಂದರೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದಾಗಿ ಹೇಳಿದ ಅವರು ಸರಕಾರದಿಂದ ಸುಸಜ್ಜಿತವಾದ ಕಟ್ಟಡ ವನ್ನು ನಿರ್ಮಿಸಲಾಗಿದೆ. ಇದರ ಪ್ರಯೋರ್ಜ ಪಡೆದು ಜನರ ಸಂಕಷ್ಟಗಳಿಗೆ ಸ್ಪಂದಿ ಸುಲ್ ಕೆಲಸ ಗ್ರಾಮ ಪಂಚಾಯತ ಸದಸ್ಯರು ಮಾಡಬೇಕು ಎಂದರು. ಈ ಸಂಧರ್ಭದಲ್ಲಿ ಶಾಸಕರನ್ನು ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಚೆನ್ನಮ್ಮಾ ಡೊಂಬರ್, ಉಪಾಧ್ಯಕ್ಷ ದತ್ತು ನಾಯ್ಕ,ಕೆ.ಪಿ. ಸಿ.ಸಿ. ಸದಸ್ಯ ಸದಾನಂದ ದಬಗಾರ, ಗ್ಯಾರಂಟಿ ಯೋಜನಾಧ್ಯಕ್ಷ ಮಂಗೇಶ ಕಾಮತ್, ಜೋಯಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಗಾವಡೆ, ಅಧಿಕಾರಿಗಳು, ಮುಖಂಡರು, ಮತ್ತಿತರರು ಉಪಸ್ಥಿತರಿದ್ದರು.