ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಸೋಮವಾರ ಗ್ರಾಹಕರ ವ್ಯವಹಾರಗಳು, ಆಹಾರ ಹಾಗೂ ನವೀಕರಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಶಿ ಭೇಟಿ ನೀಡಿದರು.
ಮೊದಲಿಗೆ ಗ್ರಾಮದೇವತೆ ಶ್ರೀಮಂಚಾಲಮ್ಮ ದೇವಿಗೆ ವಿಶೇಷ ಪೂಜೆಯನ್ನು ಸಚಿವ ಜೋಶಿ ಹಾಗೂ ಅವರ ಕುಟುಂಬದವರು ಸಲ್ಲಿಸಿದರು. ನಂತರ ಶ್ರೀಗುರುರಾಯರ ಮೂಲಬೃಂದಾವನ ದರ್ಶನ ಪಡೆದುಕೊಂಡರು.
ಸಂಜೆ ಶ್ರೀಮಠದ ಪ್ರಾಕಾರದಲ್ಲಿ ನಡೆದ ರಥೋತ್ಸವದಲ್ಲಿ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ. ಎಸ್ಪಿ. ಎಂ. ಪುಟ್ಟಮಾದಯ್ಯ
ಭಾಗವಹಿಸಿದ್ದರು. ಶ್ರೀಮಠದ ವ್ಯವಸ್ಥಾಪಕ ವೆಂಕಟೇಶ ಜೋಶಿ, ಗಿರೀಶ ಕನಕವೀಡು, ಐಪಿ ನರಸಿಂಹಮೂರ್ತಿ ಹಾಗೂ ಮತ್ತಿತರರಿದ್ದರು.