ರಾಯಚೂರು: ಮಂತ್ರಾಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ಶ್ರೀ ಗುರುಸಾರ್ವಭೌಮರ ಗುರುವೈಭವೋತ್ಸವ ಕಾರ್ಯಕ್ರಮ ವಿದ್ಯುಕ್ತವಾಗಿ ಆರಂಭಗೊಂಡಿತು.
ಶ್ರೀಗುರುರಾಘವೇಂದ್ರ ಸ್ವಾಮಿಗಳವರು ಪೀಠಾಧಿಪತ್ಯವನ್ನು ಸ್ವೀಕರಿಸಿ 403 ವರ್ಷಗಳ ಪೂರ್ಣಗೊಂಡು 404ನೇ ವರ್ಷದ ಆರಂಭಗೊಂಡ ಹಿನ್ನೆಲೆಯಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಪಾದುಕೆಗಳ ಪಟ್ಟಾಭಿಷೇಕದ ನಂತರ ರಥೋತ್ಸವ ಕಾರ್ಯಕ್ರಮ ಶ್ರೀಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸಾನಿಧ್ಯವಹಿಸಿದ್ದರು. ಶ್ರೀಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶದ ಶಿಕ್ಷಣ ಖಾತೆ ಸಚಿವ ನಾರಾಲೋಕೇಶ ಅವರು ಪಾಲ್ಗೊಂಡು ವಿಸ್ತರಣೆಗೊಂಡ ಮಧ್ವ ಮಾರ್ಗದ ಉದ್ಘಾಟನೆ ಮಾಡಿದರು. ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.