ಶಿವಮೊಗ್ಗ: ಭಾರತ ಸೇನೆಯು ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಭಯೋತ್ಪಾದಕರ ಸಂಹಾರ ಮಾಡ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ದಾಳಿ ನಡೆಸಿದ್ದು, 9 ಉಗ್ರರ ನೆಲೆಗಳು ನೆಲಸಮವಾಗಿದೆ. ಭಾರತದ ದಾಳಿಗೆ ಪಾಕಿಸ್ತಾನ ಪತರುಗುಟ್ಟಿದೆ. ಭಾರತೀಯ ಸೇನೆಯು ಏರ್‌ಸ್ಟ್ರೈಕ್ ಮೂಲಕ ಪಿಒಕೆ ಒಳಗಿನ ಭಯೋತ್ಪಾದಕ ಅಡಗುತಾಣಗಳನ್ನು ದ್ವಂಸ ಮಾಡಿದೆ. ಇತ್ತ ಪಹಲ್ಗಾಮ್ ದಾಳಿಯಲ್ಲಿ ಉಗ್ರರ ಗುಂಡಿಗೆ ಬಲಿಯಾದ ಶಿವಮೊಗ್ಗ ನಿವಾಸಿ ಮಂಜುನಾಥ್ ಮನೆಗೆ ಎನ್‌ಐಎ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಪಹಲ್ಗಾಮ್ ದಾಳಿ ಬಗ್ಗೆ ಎನ್‌ಐಎ ತಂಡ ತನಿಖೆ ನಡೆಸುತ್ತಿದೆ. ಮೃತರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಶಿವಮೊಗ್ಗದಲ್ಲಿರುವ ಮಂಜುನಾಥ್ ಮನೆಗೆ ಎನ್‌ಐಎ ತಂಡ ನಿನ್ನೆ ರಾತ್ರಿ ಭೇಟಿ ನೀಡಿದ್ದರು ಎಂದು ಮಂಜುನಾಥ್ ತಾಯಿ ಸುಮತಿ ಮಾಹಿತಿ ನೀಡಿದ್ದಾರೆ.
ಕಾಶ್ಮೀರದಲ್ಲಿ ನಡೆದ ಘಟನೆ ಬಗ್ಗೆ ಮಂಜುನಾಥ್ ಪತ್ನಿ ಹಾಗೂ ಮಗನ ಬಳಿ ಮಾಹಿತಿ ಪಡೆದಿದ್ದಾರೆ ಎಂದು ಸುಮತಿ ಹೇಳಿದ್ದಾರೆ. ಅವರು ಕೂಡ ಕಾಶ್ಮೀರದಲ್ಲಿ ಏನೇನ್ ಆಯ್ತು ಅನ್ನೋದನ್ನು ವಿವರಿಸಿದ್ದಾರೆ ಎನ್ನಲಾಗ್ತಿದೆ.