ಯಾದಗಿರಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಭೀಮಾನದಿಗೆ ನೀರಿನ ಒಳಹರಿವು ಹೆಚ್ಚಾಗಿದ್ದು, ಇಂದು ರಾತ್ರಿ ಇಲ್ಲವೇ ನಾಳೆ ಬೆಳಿಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಭೀಮಾನದಿಗೆ ನೀರು ಬಿಡುವ ಸಾಧ್ಯತೆ ಇದೆ, ಮುನ್ನೆಚ್ಚರಿಕೆ ಕ್ರಮವಾಗಿ ಯಾದಗಿರಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು, ಭೀಮಾನದಿ ನದಿ ತೀರದ ಗ್ರಾಮಗಳಲ್ಲಿ ಡಂಗೂರು ಸಾರಿ ಎಚ್ಚರಿಕೆ ನೀಡಲಾಗುತ್ತಿದೆ, ಜನರು ಮತ್ತು ವಜಾನುವಾರು ನದಿತೀರಕ್ಕೆ ತೆರಳಬಾರದೆಂದು ಡಂಗೂರದ ಮೂಲಕ ಜಾಗೃತಿ ನೀಡಲಾಗುತ್ತಿದೆ.
ಹಲವು ಮನೆಗಳು ಜಲಾವೃತ: ಈ ಮದ್ಯೆ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು, ಜಿಲ್ಲೆಯ ಶಹಾಪುರು ತಾಲೂಕಿನ ದೋರನಹಳ್ಳಿ ಗ್ರಾಮದ ಸಾಬಮ್ಮ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ಜಲಾವೃತ ಘಟನೆ ನಡೆದಿದೆ, ರಾತ್ರಿ ಇಡೀ ಮನೆಯೊಳಗೆ ನುಗ್ಗಿದ ನೀರು, ಮಳೆ ನೀರು ಹೊರಹಾಕಲು ಕುಟುಂಬಸ್ಥರು ಹರಸಾಹಸ ಪಟ್ಟಿದ್ದಾರೆ, ಮಳೆ ನೀರಿನಲ್ಲಿ ದವಸ-ಧಾನ್ಯಗಳು ನಾಶವಾಗಿದ್ದು, ಮಳೆ ನೀರಿನಲ್ಲಿ ಮನೆಯ ಸಾಮಗ್ರಿಗಳು ಕೊಚ್ಚಿ ಹೋಗಿರುವ ಘಟನೆ ನಡೆದಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ, ಮಳೆ ನೀರು ಮನೆ ಹೊಕ್ಕ ಕಾರಣ ಮಕ್ಕಳು, ವಯೋವೃದ್ಧರು ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ, ಇಷ್ಟೆಲ್ಲಾ ಸಮಸ್ಯೆಯಾದ್ರೂ ತಹಶಿಲ್ದಾರ್ ಮತ್ತು ಪಿಡಿಓ ಸ್ಥಳಕ್ಕೆ ಧಾವಿಸದೆ ಇರುವುದಕ್ಕೆ, ತಹಶಿಲ್ದಾರರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.