ಮಂಗಳೂರು: ಮಹಾದೈವರಾಜ ಕೋಟೆದ ಉಬ್ಬುಸ್ವಾಮಿ ದೈವಸ್ಥಾನ ದೇರೆಬೈಲು, ಕೊಟ್ಟಾರ ಇಲ್ಲಿ ಜನವರಿ 29ರ ಬುಧವಾರ ರಾತ್ರಿ 12ಗಂಟೆಗೆ (ರಣಕಾಟ) ಉಚ್ಚಾಟನೆ ಹಾಗೂ(ಬ್ರಹ್ಮರಾಕ್ಷಸ) ಅನ್ಯಪ್ರೇತ ಉಚ್ಚಾಟನೆ ನಡೆಯಲಿದೆ. ಹೀಗಾಗಿ ರಾತ್ರಿ 10ರಿಂದ ಬೆಳಿಗ್ಗೆ 5ಗಂಟೆಯವರೆಗೆ ರಸ್ತೆಯಲ್ಲಿ ಯಾರು ಓಡಾಡಬಾರದೆಂದು ವಿನಂತಿ ಮಾಡಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬುಧವಾರ ರಾತ್ರಿ ಕೊಟ್ಟಾರ ಪ್ರಮುಖ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಮಾಡಲಾಗುವುದು. ಪೂಜಾ ವಿಧಿ ವಿಧಾನವನ್ನು ನೋಡುವ ಆಸಕ್ತಿ ಉಳ್ಳ ಭಕ್ತರು ರಾತ್ರಿ 10ಗಂಟೆಯ ಒಳಗೆ ದೈವಸ್ಥಾನಕ್ಕೆ ಬಂದು ಸೇರತಕ್ಕದ್ದು ಎಂದು ದೈವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.