ಹಾಸನ ಜಿಲ್ಲೆ ಬೇಲೂರು ಶಾಸಕ ಹೆಚ್.ಕೆ.ಸುರೇಶ್ ತಾಯಿ ವಿಧಿವಶ.
ಹಾಸನ: ಬೇಲೂರು ವಿಧಾನಸಭಾ ಶಾಸಕ ಹೆಚ್.ಕೆ.ಸುರೇಶ್ ಅವರ ತಾಯಿ ಸಾಕಮ್ಮ(75) ಅವರು ಮಂಗಳವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ. ಅವರು ಇಬ್ಬರು ಗಂಡುಮಕ್ಕಳು, ಒಬ್ಬ ಹೆಣ್ಣುಮಗಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ಶಾಸಕರ ಸ್ವಗ್ರಾಮ ಹುಲ್ಲೇನಹಳ್ಳಿ (ಹುಲ್ಲಹಳ್ಳಿ) ಯಲ್ಲಿ ಇಂದು ಸಂಜೆ 5 ಗಂಟೆಗೆ ನಡೆಸಲಾಗುತ್ತದೆ