ಬೆಳಗಾವಿ: ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಎರಡು ಪ್ರತ್ಯೇಕ ದುರ್ಘಟನೆ ನಡೆದಿವೆ.
ಧಾರಾಕಾರ ಮಳೆಗೆ ಆಟೋ ಚಾಲಕ ಕೊಚ್ಚಿಕೊಂಡು ಹೋದ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಚಿಕ್ಕಬೂದನೂರ ಗ್ರಾಮದಲ್ಲಿ ನಡೆದಿದೆ. ಮಳೆರಾಯನ ಅರ್ಭಟದಿಂದ ರಾತ್ರಿ ತುಂಬಿ ಹರಿಯುತ್ತಿದ್ದ ಗ್ರಾಮದ ಹೊರ ವಲಯದ ಹಳ್ಳ. ಆಟೋ ದಾಟಿಸುವಾಗ ನೀರಿನ ರಭಸಕ್ಕೆ ಆಟೋ ಸಮೇತ ಚಾಲಕ ನೀರಿನಲ್ಲಿ ತೇಲಿ ಹೋಗಿದ್ದರಿಂದ ಆಟೋ ಚಾಲಕನಿಗಾಗಿ ಹಗ್ಗ ಬಿಟ್ಟು ಗ್ರಾಮಸ್ಥರ ಹುಡುಕಾಟ ನಡೆಸಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನೂ ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಮಣ್ಣಿನ ಗೋಡೆ ಕುಸಿದು ಬಿದ್ದು ವೃದ್ದೆ ಮೃತಪಟ್ಟಿದ್ದಾರೆ. ಚಿಕ್ಕನಂದಿ ಗ್ರಾಮದ ನಿವಾಸಿ ಫಕ್ಕೀರವ್ವ ಹಾವೇರಿ(65) ಎಂಬುವಳೇ ಮೃತ ದುರ್ದೈವಿ. ಕುಸಿದ ಗೋಡೆಯ ಕೆಳಗೆ ಸಿಲುಕಿದ ಫಕ್ಕೀರವ್ವಗೆ ಕೂಡಲೇ ಸ್ಥಳೀಯರು ಹೊರ ತೆಗೆದರಾದರೂ ಅಷ್ಟರಲ್ಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಅವರ ಮರಣೋತ್ತರ ಪರೀಕ್ಷೆಗೆ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಶವ ಸಾಗಿಸಲಾಗಿದೆ.ಗೋಕಾಕ ಗ್ರಾಮೀಣ ಠಾಣಾ ಪೊಲಿಸರು ಸ್ಥಳಕ್ಕೆ ಬಂದಿದ್ದಾರೆ.