ಬಿಜೆಪಿಯವರದ್ದು ಸುಳ್ಳು ಹೇಳಿದ್ದೇ ಸಾಧನೆ

ಹೊಸಪೇಟೆ: ಬಿಜೆಪಿಯವರದ್ದು ಸುಳ್ಳು ಹೇಳಿರುವುದೇ ಸಾಧನೆ. ನಮ್ಮದು ನಿಜವಾದ ಸಾಧನೆಯಾಗಿದೆ. ಸರಕಾರ ಎರಡು ವರ್ಷದಲ್ಲಿ‌ ಮಾಡಿದ ಜನಪರ ಕೆಲಸಗಳನ್ನು ಜ‌ನರ ಮುಂದಿಡಲು ಸಂಕಲ್ಪ ಸಮರ್ಪಣ ಸಮಾವೇಶ ಹಮ್ಮಿಕೊಂಡಿದ್ದೇವೆ ಇದಕ್ಕೆ ಎಲ್ಲ ಪಕ್ಷದವರನ್ನು ಆಹ್ವಾನಿಸಿದ್ದೇವೆ ಎಂದು ಮುಖ್ಯಂಮತ್ರಿ ಸಿದ್ದರಾಮಯ್ಯ ಹೇಳಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಮಾವೇಶದ ಪೂರ್ವಸಿದ್ದತೆ ಪರಿಶೀಲಿಸಿ ಮಾತನಾಡಿದ ಅವರು, ಇವತ್ತು ನಾನು ಡಿ. ಕೆ. ಶಿವಕುಮಾರ್ ಹಾಗೂ ಸಂಪುಟದ ಸಚಿವರು ಬಂದಿದ್ದೇವೆ. ‌‌20ಕ್ಕೆ ನಮ್ಮ ಸರ್ಕಾರ ಬಂದು ಎರಡು ವರ್ಷ ಆಗುತ್ತದೆ. ಅವತ್ತು 10 ಜನ ಪ್ರಮಾಣ ವಚನ ಸ್ವೀಕಾರ ಮಾಡಿದ್ವಿ. ಆ ಬಳಿಕ ನಮ್ಮ ಸರ್ಕಾರ ರಚನೆ ಆಯ್ತು. ಅವತ್ತೇ ಪಂಚ ಗ್ಯಾರಂಟಿಗಳನ್ನ ಘೋಷಣೆ ಮಾಡಿದ್ವಿ. ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ, ಯುವನಿಧಿ, ಯೋಜನೆಗಳನ್ನ ಹಂತ ಹಂತವಾಗಿ ಮಾಡಿದ್ವಿ. ಎರಡು ವರ್ಷ ಆಗಿದ್ರಿಂದ, ಇಲ್ಲಿಯವರೆಗೂ ಏನೇನ್ ಮಾಡಿದ್ದೀವಿ ಅನ್ನೋದನ್ನ ಜನರ ಮುಂದೆ ಇಡಬೇಕು.
136 ಜನ ನಮ್ಮ ಪಕ್ಷದ ಶಾಸಕರು ಗೆದ್ದಿದ್ದು. ಉಪ ಚುನಾವಣೆಯಲ್ಲಿ ಇಬ್ಬರು ಗೆದ್ದಿದ್ರಿಂದ 138 ಇದೆ. ಪಕ್ಷೇತರರೂ ನಮಗೆ ಬೆಂಬಲ ನೀಡಿದ್ದಾರೆ. ಇವಾಗ ನಾವು 140 ಜನ ಇದ್ದೀವಿ. ಏನೇನು ಹೇಳಿದ್ವೋ ಅವುಗಳನ್ನ ಎರಡು ವರ್ಷಗಳಲ್ಲಿ ಪ್ರಾಮಾಣಿಕವಾಗಿ ಈಡೇರಿಸಿದ್ದೇವೆ
ವಿಪಕ್ಷದವ್ರು ಗ್ಯಾರಂಟಿ ಮಾಡಿದ್ರಿಂದ ಅಭಿವೃದ್ಧಿ ಯೋಜನೆಗಳಿಗೆ ದುಡ್ಡು ಇಲ್ಲ ಅಂತಿದ್ದಾರೆ. ನಾವು ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ 96 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಕಳೆದ ವರ್ಷ ಕ್ಯಾಪಿಟಲ್ expenditure 51 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಈ ವರ್ಷವೂ ಗ್ಯಾರಂಟಿ ಯೋಜನೆಗೆ ಹಣ ಇಟ್ಟಿದ್ದೇವೆ. ಬೇಕಿದ್ರೆ ಇನ್ನಷ್ಟೂ ಮೀಸಲಿಡ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಸುಳ್ಳು ಹೇಳೋದೆ ಬಿಜೆಪಿ ಕೆಲಸ: ಹಣ ಇಲ್ಲ ಅಂತಾ ಬಿಜೆಪಿಯವರು ಹೇಳೋದು ಸುಳ್ಳು ಅನ್ನೋದು ಸಾಭೀತಾಗಿದೆ. ನಾವು ಏನು ಹೇಳಿದ್ವೋ ಅದನ್ನ ಮಾಡಿದ್ದೇವೆ ನುಡಿದಂತೆ ನಡೆದ ಸರ್ಕಾರ ಯಾವುದಾದ್ರೂ ಇದ್ರೆ ಅದು ನಮ್ಮ ಸರ್ಕಾರ. 3ಲಕ್ಷ 71 ಸಾವಿರ ಕೋಟಿ ಬಜೆಟ್ ಕೊಟ್ಟಿದ್ದೇವೆ, ಮುಂದೆ 4 ಲಕ್ಷ 80 ಸಾವಿರ ಕೋಟಿ ಬಜೆಟ್ ಆಗುತ್ತದೆ. ನಾವು ಆರ್ಥಿಕವಾಗಿ ದಿವಾಳಿ ಆಗಿದ್ರೆ ಬಜೆಟ್ ಗಾತ್ರ ಹೆಚ್ಚಳ ಆಗ್ತಿತ್ತಾ? ಅದು ಹೇಗೆ ಸಾಧ್ಯ ಆಗ್ತಿತ್ತು, ಒಂದು ವರ್ಷದಲ್ಲಿ 38 ಸಾವಿರ ಕೋಟಿ ಬಜೆಟ್ ಹೆಚ್ಚಳವಾಗಿದೆ. ಬಿಜೆಪಿಯವ್ರು ಎಲ್ಲದನ್ನೂ ರಾಜಕೀಯವಾಗಿ ಮಾತಾಡ್ತಾರೆ. ಆರ್ಥಿಕತೆ ಬಗ್ಗೆ ಅವ್ರಿಗೆ ಗೊತ್ತಿಲ್ಲ ಕೆಕೆಆರ್ಡಿಬಿ ಅಭಿವೃದ್ಧಿಗೆ 5 ಸಾವಿರ ಕೋಟಿ ಕೊಡ್ತಿದ್ದೇವೆ.‌ ಬಿಜೆಪಿ ಅಧಿಕಾರಲ್ಲಿದ್ದಾಗ ಬೊಮ್ಮಾಯಿ ಕೊನೆ ಗಳಿಗೆಯಲ್ಲಿ 3 ಸಾವಿರ ಕೋಟಿ ಘೋಷಣೆ ಮಾಡಿದ್ರು. ಆದ್ರೆ ನಾವು 5 ಸಾವಿರ ಕೋಟಿ ಕೊಟ್ಟಿದ್ದೇವೆ. 371ಜೆ ಮಾಡಿದ್ದು ನಮ್ಮ ಸರ್ಕಾರ. ವಿಶೇಷ ಸೌಲಭ್ಯ ಕೊಡಬೇಕು ಎಂದು ನಮ್ಮ ಸರ್ಕಾರ ಮಾಡಿದ್ದು ಎಂದು ಸಿದ್ದರಾಮಯ್ಯ ಹೇಳಿದರು.

ಕೇಂದ್ರ ಸರ್ಕಾರ ಹೈದ್ರಾಬಾದ್ ಕರ್ನಾಟಕ್ಕೆ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ ಎಂದು ಆರೋಪಿಸಿದ ಸಿದ್ದರಾಮಯ್ಯ, ಬಿಜೆಪಿಯವ್ರು 4 ವರ್ಷ ಅಧಿಕಾರದಲ್ಲಿ ಇದ್ದಾಗ ಒಂದೇ ಒಂದು ಮನೆ ಕೊಡಲಿಲ್ಲ. ನಾವು ಸಮಾವೇಶದಲ್ಲಿ 1 ಲಕ್ಷ ಹಕ್ಕುಪತ್ರ ಕೊಡ್ತೇವೆ. ಹಟ್ಟಿ, ದೊಡ್ಡಿ, ಹಾಡಿ, ತಾಂಡಾ ಜನ್ರಿಗೆ ಹಕ್ಕುಪತ್ರ ಕೊಡ್ತೇವೆ. ಕಂದಾಯ ಗ್ರಾಮಗಳನ್ನಾಗಿ ಮಾಡಲಾಗ್ತದೆ, ಹಟ್ಟಿ, ಹಾಡಿ, ತಾಂಡಾ, ದೊಡ್ಡಿ ಇವ್ಯಾವೂ ಮೊದಲು ಕಂದಾಯ ಗ್ರಾಮಗಳಾಗಿರಲಿಲ್ಲ. ಅದನ್ನ ಮಾಡಿದ್ದೂ ನಮ್ಮ ಕಾಂಗ್ರೆಸ್ ಸರ್ಕಾರ,‌ಈ ಹಿಂದೆ ಪ್ರಧಾನ ಮಂತ್ರಿ ತರಾತುರಿಯಲ್ಲಿ ಬಂದು 50 ಸಾವಿರ ಜನರಿಗೆ ಹಕ್ಕುಪತ್ರ ಕೊಡ್ತೇವೆ ಎಂದು ಹೇಳಿದ್ರು.ಆದ್ರೆ ನಾವು ಇವಾಗ 1 ಲಕ್ಷದ 3 ಸಾವಿರ ಹಕ್ಕು ಪತ್ರ ಕೊಡ್ತೇವೆ ಎಂದ ಸಿಎಂ ಸಿದ್ದರಾಮಯ್ಯ, ಇದೇ ತಿಂಗಳು 20ರಂದು ಸಮಾವೇಶ ಮಾಡ್ತಿದ್ದೇವೆ. ಸಮರ್ಪಣೆ ಸಂಕಲ್ಪ ಹೆಸರಿನಲ್ಲಿ ಕಾರ್ಯಕ್ರಮ ಮಾಡ್ತೇವೆ. ಅವತ್ತು ಕನಿಷ್ಠ 3 ಲಕ್ಷ ಜನ ಸೇರ್ತಾರೆ. ಅದಕ್ಕಿಂತಲೂ ಹೆಚ್ಚು ಜನ ಬರ್ತಾರೆ.ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ, ವೇಣುಗೋಪಾಲ ಸೇರಿದಂತೆ ಎಐಸಿಸಿ ಸೆಕ್ರೆಟರಿಗಳು ಬರ್ತಾರೆ. ಪ್ರಿಯಾಂಕಾ ಗಾಂಧಿ ಅವರನ್ನೂ ಕರೆದಿದ್ದೇವೆ, ಸಾಧ್ಯ ಆದ್ರೆ ಬರುತ್ತೇನೆ ಎಂದು ಹೇಳಿದ್ದಾರೆ. ಇದು ಸರ್ಕಾರಿ ಕಾರ್ಯಕ್ರಮ ನಾವು ಅಶೋಕ್, ಚಲುವಾದಿ ನಾರಾಯಣಸ್ವಾಮಿ ಸೇರಿದಂತೆ ಎಲ್ಲಾ ಶಾಸಕರು, ಸಂಸದರನ್ನೂ ಕರೆದಿದ್ದೇವೆ ಇದು ಸರ್ಕಾರಿ ಕಾರ್ಯಕ್ರಮ ಎಂದು ಒತ್ತಿ ಒತ್ತಿ ಹೇಳಿದರು, ಕಾಂಗ್ರೆಸ್, ಜೆಡಿಎಸ್‌ನವರೂ ಬರ್ತಾರೆ ಅನ್ನೋ ವಿಶ್ವಾಸ ಇದೆ
ಇಲ್ಲಿಯವರೆಗೂ ಏನ್ ಮಾಡಿದ್ದೀವಿ, ಏನ್ ಮಾಡ್ತೀವಿ ಅನ್ನೋದನ್ನ ಜನಗಳ ಮುಂದೆ ಹೇಳ್ತೇವೆ. ನಾಗೇಂದ್ರ ಅವರನ್ನ ಮಂತ್ರಿ ಮಾಡ್ತೇವೆ ಎಂದ ಸಿಎಂ ಸಿದ್ದರಾಮಯ್ಯ,‌ ಅದಕ್ಕೆ ಗಳಿಗೆ ಮುಹೂರ್ತ ಕೂಡಿ ಬರಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ‌ಹೇಳಿದರು.