ಯಕ್ಸಂಬಾ: ಸಮೀಪದ ಸದಲಗಾ ಪಟ್ಟಣದ ಹೊರವಲಯದಲ್ಲಿರುವ ಪುರಸಭೆ ಮಾಜಿ ಅಧ್ಯಕ್ಷ ಅಭಿಜಿತ ಪಾಟೀಲ ಅವರ ತೋಟದಲ್ಲಿನ ಬಾವಿಯಲ್ಲಿ 16 ಮೊಸಳೆ ಮರಿಗಳು ಪತ್ತೆಯಾಗಿದ್ದು, ಸೆರ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ನಡೆದಿದೆ.
ಸ್ಥಳೀಯರಾದ ಅಭಿಜೀತ ಪಾಟೀಲ, ದತ್ತಾ ತಪಕೇರಿ, ದಯಾನಂದ ಪಾಟೀಲ, ಹೊನ್ನಸಿದ್ದ ಗೊಡೆ, ಜೈಪಾಲ ಮಂಗಾಜೆ ಮುಂತಾದವರ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಕ್ಷಿಸಿದ ಮೊಸಳೆಯ ಮರಿಗಳನ್ನು ವಶಕ್ಕೆ ಪಡೆದರು. ಮೊಸಳೆಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.
ಸ್ಥಳದಲ್ಲಿ ಇನ್ನೂ ಕೆಲವೊಂದಿಷ್ಟು ಮೊಸಳೆ ಮರಿಗಳು ಇದ್ದು, ಬೃಹತ್ ಗಾತ್ರ ಮೊಸಳೆಯೊಂದು ಇದೆ ಎಂದು ಗೊತ್ತಾಗಿದೆ. ಇವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸ್ಥಳೀಯರ ಒತ್ತಾಯಿಸಿದರು.